ಸತತ ಗಣನಾಥ

ಸತತ ಗಣನಾಥ

(ರಾಗ ನಾಟ ಅಟ ತಾಳ) ಸತತ ಗಣ ನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ಮು- ಕುತಿ ಪಥಕೆ ಮನವೀವ ಮಹಾ ರುದ್ರದೇವ ಭಕುತಿದಾಯಕಳು ಭಾರತೀ ದೇವಿ ಯು- ಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿಯಿತ್ತು ಗತಿ ಪಾಲಿಸುವ ನಮ್ಮ ಪವಮಾನನು ಚಿತ್ತದಲಿ ಆನಂದ ಸುಖನೀವಳು ರಮಾ ಭಕ್ತ ಜನರೊಡೆಯ ನಮ್ಮ ಪುರಂದರವಿಠಲನು ಸತತ ಇವರೊಳು ನಿಂತೀ ಕೃತಿಯ ನಡೆಸುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು