ನರಸಿಂಹ ಮಂತ್ರವೊಂದಿರಲು

(ರಾಗ ಕಾಂಭೋಜಿ. ಝಂಪೆ ತಾಳ ) ನರಸಿಂಹ ಮಂತ್ರವೊಂದಿರಲು ಸಾಕು ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ ಅಸುರ ಕುಲದವರಿಗೆ ಶತ್ರು ಮಂತ್ರ ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರನಾದ ಮೇಲೆ

(ರಾಗ ನಾದನಾಮಕ್ರಿಯಾ. ಆದಿ ತಾಳ ) ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ಭೂತ ದಯಾಪರನಾಗಿರ ಬೇಕು ಪಾತಕವೆಲ್ಲವ ಕಳೆಯಲು ಬೇಕು ಮಾತು ಮಾತಿಗೆ ಹರಿಯೆನ್ನ ಬೇಕು ಆರು ವರ್ಗವನಳಿಯಲು ಬೇಕು ಮೂರು ಗುಣಂಗಳ ಮೀರಲು ಬೇಕು ಸೇರಿ ಬ್ರಹ್ಮನೊಳಿರಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇನು ಮಾಡಿದೆನೋ

(ರಾಗ ಸಾರಂಗ. ಅಟ ತಾಳ ) ನಾನೇನು ಮಾಡಿದೆನೋ, ಕೃಷ್ಣಯ್ಯ ನೀನೆನ್ನ ಸಲಹಬೇಕು ಕರಿರಾಜ ಕರೆಸಿದನೆ, ದ್ರೌಪದಿ ದೇವಿ ಬರೆದೋಲೆಯ ಕಳುಹಿದಳೆ ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ ಹೇ ಸ್ವಾಮಿ ರಕ್ಕಸ ತನುಜನಲ್ಲೆ ಪ್ರಹ್ಲಾದ ಚಿಕ್ಕ ಪ್ರಾಯದ ಧ್ರುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇಕೆ ಬಡವನು

(ರಾಗ ಮುಖಾರಿ . ಝಂಪೆ ತಾಳ ) ನಾನೇಕೆ ಬಡವನು ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ ಪುಟ್ಟಿಸಿದ ತಾಯ್ತಂದೆ ಇಷ್ಟ ಮಿತ್ರನು ನೀನೆ ಅಷ್ಟ ಬಂಧುವು ಸರ್ವ ಬಳಗ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬದಿರು ಈ ದೇಹ

(ರಾಗ ಮಧ್ಯಮಾವತಿ. ಝಂಪೆ ತಾಳ ) ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ ಎಲುವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಒಳಗೆ ಮಲಮೂತ್ರಾದಿ ಕ್ರಿಮಿಗಳಿರವು ಹಲವು ವ್ಯಾಧಿಯ ಬೀಡು ಪಂಚಭೂತದನಾಡು ಬಲುಹು ದೇಹವ ನೆಚ್ಚಿ ಕೆಡಬೇಡ ಮನುಜ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೈವೇದ್ಯವ ಕೊಳ್ಳೊ

(ರಾಗ ಆನಂದಭೈರವಿ. ಆದಿ ತಾಳ ) ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವನಿಟ್ಟೆನೋ ಘಮ ಘಮಿಸುವ ಶಾಲ್ಯನ್ನ ಪಂಚ ಭಕ್ಷ್ಯ ಅಮೃತ ಕೂಡಿದ ದಿವ್ಯ ಪರಮಾನ್ನವೋ ರಮಾ ದೇವಿಯರು ಸ್ವಹಸ್ತದಿ ಮಾಡಿದ ಪಾಕ ಭೂಮಿ ಮೊದಲಾದ ದೇವಿಯರು ಸಹಿತೌತಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ನಿನ್ನೊಳನ್ಯ ಬೇಡುವುದಿಲ್ಲ

(ರಾಗ ಪೂರ್ವಿ. ಅಟ ತಾಳ ) ನಾ ನಿನ್ನೊಳನ್ಯ ಬೇಡುವದಿಲ್ಲ ,ಎನ್ನ ಹೃದಯ ಕಮಲದೊಳು ನಿಂದಿರು ಹರಿಯೆ ಶಿರ ನಿನ್ನ ಚರಣಕೆ ಎರಗಲಿ, ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ ಕರ್ಣ ಗೀತಂಗಳ ಕೇಳಲಿ ನಿನ್ನ ನಿರ್ಮಾಲ್ಯವ ನಾಸವಾಘ್ರಾಣಿಸಲಿ ಹರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ಮಾಡಿದ ಕರ್ಮ

(ರಾಗ ಸಾವೇರಿ. ತ್ರಿಪುಟ ತಾಳ ) ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೊ ದೇವ ||ಪ|| ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಫಣೆಯಲ್ಲಿ ಬರೆದುದಕೆ ||ಅ.ಪ|| ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ, ಪರ- ಸತಿಯರ ಸಂಗಗಳ ಬಿಟ್ಟವನಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಸುಕ ತೆಗೆದರೆ

(ರಾಗ ಮುಖಾರಿ. ಆದಿ ತಾಳ ) ಮುಸುಕ ತೆಗೆದರೆ ಬೆನ್ನಿಲಿ ನಾಲಿಗೆ , ಇದರ ಹೆಸರು ಬಲ್ಲವರುಂಟೆ ಪೇಳಿ ರಂಗಯ್ಯ ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು ಸುತ್ತೇಳು ಮೈಗೆರಡು ಜೋಡು ಭಂಗಾರದ ಸೃಷ್ಟಿಯೊಳಗೆ ಇದರ ಹೆಸರು ಬಲ್ಲವರುಂಟೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೂರುತಿಯನೆ ನಿಲ್ಲಿಸೋ

(ರಾಗ ಕಮಾಚ್. ರೂಪಕ ತಾಳ ) ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ ಮೂರುತಿಯೆನೆ ನಿಲ್ಲಿಸೋ ||ಪ|| ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ || ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀ ಲಕುಮಿಯು ಉರದೊಳೊಪ್ಪುವ ನಿನ್ನ||
ದಾಸ ಸಾಹಿತ್ಯ ಪ್ರಕಾರ
ಬರೆದವರು