ಪರಾಕು ಮಾಡದೆ

(ರಾಗ ಸಾವೇರಿ ಆದಿ ತಾಳ) ಪರಾಕು ಮಾಡದೆ ಪರಾಮರಿಸಿ ಎನ್ನ ಅಪರಾಧಂಗಳ ಕ್ಷಮಿಸೊ ||ಪ|| ಧರಾರಮಣ ಫಣಿಧರಾರ್ಚಿತ ಸುರಾಧಿಪತಿ ವಿಧಿ ಹರಾದಿವಂದಿತ ||ಅ.ಪ|| ನರರೊಳಗೆ ಪಾಮರನು ನಾನಿಹ- ಪರಕೆ ಸಾಧನವರಿಯೆ ಶ್ರೀಹರಿಯೆ ಶರಣು ಹೊಕ್ಕೆ ನಿನ್ನ ಚರಣ ಕಮಲಕ್ಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಪಿ ಬಲ್ಲನೆ ಪರರ ಸುಖದುಃಖವ

(ರಾಗ ಮುಖಾರಿ ಝಂಪೆ ತಾಳ) ಪಾಪಿ ಬಲ್ಲನೆ ಪರರ ಸುಖ ದುಃಖವ ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ|| ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ ತೊತ್ತು ಬಲ್ಲಳೆ ಮಾನಾಪಮಾನವೆಂಬುದನು ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ (/ ಕೊತ್ತಿ* ಬಲ್ಲುದೆ ಹಾಲು ಮೀಸಲೆಂಬುದನು)||೧|| ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ ಶ್ವಾನ ಬಲ್ಲುದೆ ರಾಗ ಭೇದಂಗಳ ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು ಹೀನ ಬಲ್ಲನೆ ಸುಗುಣ ದುರ್ಗುಣವನು ||೨|| ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು ಸೂಳೆ ಬಲ್ಲಳೆ ಗೆಳೆಯಗಿಹ ಬಡತನ ಕೇಳ ಬಲ್ಲನೆ ಕಿವುಡನೇಕಾಂತ ಮಾತುಗಳ ಹೇಳ ಬಲ್ಲನೆ ಮೂಕ ಕನಸು ಕಂಡುದನು ||೩|| ಕಾಗೆ ಬಲ್ಲದೆ ಒಳ್ಳೆ ಕೋಗಿಲೆಯ ಸ್ವರವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ನಾಮವು ಸಾಲದೆ

(ರಾಗ ಕಲ್ಯಾಣಿ ಅಟ ತಾಳ) ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ ಒಂದೇ ನಾಮವು ಸಾಲದೆ ||ಪ|| ಒಂದೇ ನಾಮವು ಭವಬಂಧನ ಬಿಡಿಸುವು- ದೆಂದು ವೇದಂಗಳಾನಂದದಿ ಸ್ತುತಿಸುವ ||ಅ.ಪ|| ಉಭಯ ರಾಯರು ಸೇರಿ ಮುದದಿ ಲೆತ್ತವನಾಡಿ ಸಭೆಯೊಳು ಧರ್ಮಜ ಸತಿಯ ಸೋಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ನಾಮದಲಡಗಿದವೋ

(ರಾಗ ಆನಂದಭೈರವಿ ಆದಿ ತಾಳ) ಒಂದೇ ನಾಮದಲಡಗಿದವೋ, ಅಡಗಿದವೋ ||ಪ|| ಆನಂದದಿಂದುದಿಸಿರುವ ಅಖಿಳ ವೇದಗಳು ||ಅ.ಪ|| ಒಂದೇ ನಾಮವು ಪ್ರಹ್ಲಾದನ್ನ ಕಾಯಿತು, ಮ- ತ್ತೊಂದು ನಾಮವು ಅಜಾಮಿಳನ ಸಲಹಿತು ತಂದೆ ತಾಯಿಯು ಬಿಟ್ಟ ಕಂದ ಧ್ರುವರಾಯಗಾ- ನಂದದ ಪದವನಿತ್ತಾನಂತ ಗುಣವೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಓಡಿ ಬಾರಯ್ಯ

(ರಾಗ ಭೈರವಿ ಆದಿ ತಾಳ) ಓಡಿ ಬಾರಯ್ಯ ವೈಕುಂಠಪತಿ, ನಿನ್ನ ನೋಡುವೆ ಮನದಣಿಯೆ ||ಪ|| ಕಾಡಬೇಡವೋ ಕರುಣಾಕರ ,ನಿನ್ನ ಬೇಡಿಕೊಂಬೆನೊ ರಂಗಯ್ಯ ಬೇಗ ||ಅ.ಪ|| ಕೆಂದಾವರೆ ಪೋಲ್ವ ಪಾದಗಳಿಂದ , ರಂಗ ಧಿಂ ಧಿಮಿ ಧಿಮಿಕೆಂದು ಕುಣಿಯುತಲಿ ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ, ಅರ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀಲಗುದುರೆಯನ್ನೇರಿ...

ಧ್ರುವತಾಳ ನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿ ಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ ಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲು ಸಾಲು ಬೆರಳುಂಗುರ ಕೈಲಿ ಖಡ್ಗವ ಪಿಡಿದು ತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದು ಏನೋ ಚರಿತ...

ಇದು ಏನೋ ಚರಿತ ಯಂತ್ರೋದ್ಧಾರ ಇದು ಏನೋ ಚರಿತ ಶ್ರೀಪದುಮನಾಭನ ದೂತ ಸದಾ ಕಾಲದಲಿ ಸರ್ವರ ಹೃದಯಾಂತರ್ಗತ ವಾರಿಧಿ ಗೋಷ್ಪಾದನೀರಂತೆ ದಾಟಿದ ಧೀರ ಯೋಗಾಸನಧಾರಿಯಾಗಿಪ್ಪೋದು ದುರುಳ ಕೌರವರನ್ನು ವರಗದೆಯಲಿ ಕೊಂದ ಕರದಲ್ಲಿ ಜಪಮಾಲೆ ಧರಿಸಿ ಎಣಿಸುವದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನೆಯ ಕಟ್ಟುವರುಂಟು

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು ಧನವ ಗಳಿಸುವರುಂಟು ಗಳಿಸದಿದ್ದವರುಂಟು ಧನವ ಕಟ್ಟುವರುಂಟು ದಾನ ಮಾಡುವರುಂಟು ಋಣವ ಕೊಟ್ಟವರುಂಟು ಋಣ ಮಾಡಿದವರುಂಟು ಮಣೆಗಾರತನವಿದರೊಳೆಂದಿಗೂ ಬೇಡ ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ದಾಸರದಾಸರಾದ ಕನಕದಾಸರು

ದಾಸರದಾಸರಾದ ಕನಕದಾಸರು ಉಡುಪಿಯಲ್ಲಿ ಕನಕದಾಸರಿಂದ ಆದ ಚಮತ್ಕಾರ ಎಲ್ಲರೂ ತಿಳಿದದ್ದೇ. ಅಂತಹಾ ಮಹಾನ್ ಭಕ್ತ ಬೇಲೂರಿನಲ್ಲಿ ದಾಸರ ದಾಸರಾಗಿ ಊಳಿಗ ಮಾಡಿದ್ದು, ಅದನ್ನು ಮಹಾಪುಣ್ಯದ ಕೆಲಸ ಎಂದು ಅವರು ಭಾವಿಸಿದ್ದು ಅವರ ವೈಶಿಷ್ಟ್ಯ.
ಬಗೆ

ಎಷ್ಟು ದುಷ್ಟನೆ, ಯಶೋದೆ

(ರಾಗ ಶಂಕರಾಭರಣ. ಅಟ ತಾಳ) ಎಷ್ಟು ದುಷ್ಟನೆ, ಯಶೋದೆ, ನಿನ್ನ ಮಗ ಅಷ್ಟು ಹೇಳ್ವೆನು ಕೇಳೇ ||ಪ|| ಸೃಷ್ಟಿಯೊಳಗೆ ಇಂಥ ಚೇಷ್ಟೆಕೋರನ ಕಾಣೆ ಹುಟ್ಟಿಸಿದಾ ಬ್ರಹ್ಮ ಗಟ್ಟಿಗ ಕಾಣಮ್ಮ ||ಅ.ಪ|| ತೊಟ್ಟು ಹಿಡಿದು ಎನ್ನ ತೊಟ್ಟ ಕುಪ್ಪಸ ಗಂಟು ಬಿಟ್ಟು ಬೇಗ ಮುದ್ದಿಟ್ಟು ಕಠಿನ ಕುಚ
ದಾಸ ಸಾಹಿತ್ಯ ಪ್ರಕಾರ
ಬರೆದವರು