ಮೂರ್ಖರಾದರು ಜನರು

(ರಾಗ ಮುಖಾರಿ. ಝಂಪೆ ತಾಳ ) ಮೂರ್ಖರಾದರು ಜನರು ಲೋಕದೊಳಗೆ ||ಪ|| ಏಕ ದೇವನ ಬಿಟ್ಟು ಕಾಕು ದೈವವ ಭಜಿಸಿ ||ಅ.ಪ|| ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ ಗಂಟನೊಬ್ಬರ ಕೈಯಲಿಡುವಾತ ಮೂರ್ಖ ನೆಂಟರಿಗೆ ಸಾಲವನು ಕೊಡುವಾತ ಮೂರ್ಖ, ಜನ- ಕಂಟಕನಾಗಿರುವ ಕಡು ಮೂರ್ಖನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಖ್ಯಪ್ರಾಣ ಎನ್ನ

(ರಾಗ ಕಾಂಭೋಜಿ. ಝಂಪೆ ತಾಳ ) ಮುಖ್ಯಪ್ರಾಣ ಎನ್ನ ಮೂಲ ಗುರುವೆ ||ಪ|| ರಕ್ಕಸಾಂತಕ ಶ್ರೀ ರಾಮನ ನಿಜ ದಾಸ ||ಅ.ಪ|| ತಂದೆ ನೀನೆ ಎನಗೆ ತಾಯಿ ನೀನೇ ಎನಗೆ ಬಂಧು ನೀನೇ ಎನಗೆ ಬಳಗವು ನೀನೇ ಎಂದೆಂದಿಗು ನಮ್ಮೆಲರ ರಕ್ಷಿಪನು ನೀನೇ || ತಾತ ನೀನೇ ಎನಗೆ ಕರ್ತ ನೀನೇ ಎನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೆಲ್ಲ ಮೆಲ್ಲನೆ ಬಂದನೆ

(ರಾಗ ಮೋಹನ. ಆದಿ ತಾಳ ) ಮೆಲ್ಲ ಮೆಲ್ಲನೆ ಬಂದನೆ ,ಗೋಪ್ಯಮ್ಮ ಕೇಳೆ ಮೆಲ್ಲ ಮೆಲ್ಲನೆ ಬಂದನೆ ||ಪ|| ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟು ನಿಲ್ಲದೆ ಓದಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ|| ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಯೆ ಎನ್ನ

(ರಾಗ ಧನ್ಯಾಸಿ. ಅಟ ತಾಳ ) ಮಾಯೆ ಎನ್ನ ಕಾಯವನ್ನುಪಾಯದಿಂದ ನೋಯಿಸಿ ಬಾಯಿ ಮುಚ್ಚಿ ಕೊಲ್ಲುತಾಳೆ ಕಾಯೋ ಲಕ್ಷ್ಮಿಯರಸನೆ ಮಾತಾ ಪಿತರ ವಿಕಳದಿಂದ ಶ್ವೇತ ಬಿಂದು ಬೀಳಲು ರಕ್ತ ಕೀವು ತಾಕಿ ಮಾಂಸ ಚೀಲದೊಳಗೆ ಬೆಳೆದ ನಾ ರಕ್ತ ಸೂಸಿ ಬಸಿರೊಳೊಂಭತ್ತು ತಿಂಗಳಿದ್ದೆ ನಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾತಿಗೆ ಬಾರದ ವಸ್ತು

(ರಾಗ ಕಾಂಭೋಜಿ. ಝಂಪೆ ತಾಳ ) ಮಾತಿಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು ತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು ದಾನವಿಲ್ಲದ ಮನೆಯು ದೊಡ್ಡದಾದರೇನು ಹೀನ ಗುಣವುಳ್ಳವಗೆ ಹಿರಿಯತನ ಬಂದರೇನು ಶ್ವಾನನ ಮೊಲೆಯೊಳಗೆ ಹಾಲಿದ್ದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ವರಾಯ ಗುರು

(ರಾಗ ಸಾವೇರಿ. ಆಟ ತಾಳ) ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ||ಪ|| ರಾಮಾವತಾರದೊಳೊಮ್ಮೆ ಮಧ್ವರಾಯ ನೀ ಮಹಾ ಹನುಮನಾದ್ಯೋ ಮಧ್ವರಾಯ ಕಾಮಿತಾರ್ಥ ಸುರರಿಗಿತ್ತ್ಯೋ ಮಧ್ವರಾಯ , ಅಯ್ಯ ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುಳಾಟವೇಕೋ ಮನುಜ

(ರಾಗ ಯದುಕುಲಕಾಂಭೋಜಿ. ಆದಿ ತಾಳ) ಮರುಳಾಟವೇಕೋ ಮನುಜ ಕೂಗಾಟವೇಕೋ ಸರುವ ದುರ್ಗುಣಂಗಳನ್ನು ಶರೀರದಿ ಬಚ್ಚಿಟ್ಟುಕೊಂಡು ||ಪ|| ಮೃತ್ತಿಕೆ ಶೌಚ ಮಾಡದವಗೆ ಮತ್ತೆ ಸ್ನಾನ ಮಂತ್ರವೇಕೆ ಹೊತ್ತು ಕಟ್ಟಾದವಗೆ ಅಗ್ನಿಹೋತ್ರವೇತಕೆ ತೊತ್ತು ಬಡಕನಿಗೆ ಪರತತ್ವದ ವಿಚಾರವೇಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆತೆಯೇನೋ ರಂಗ

(ರಾಗ ಮೋಹನ. ಏಕ ತಾಳ) ಮರೆತೆಯೇನೋ ರಂಗ ಮಂಗಳಾಂಗ ||ಪ|| ಕೋಲು ಕೈಯಲ್ಲಿ ಕೊಳಲು ಜೋಲು ಕಮ್ಬಳಿ ಹೆಗಲ ಮೇಲೆ ಕಲ್ಲಿನ ಚೀಲ ಕನ್ಕುಳಲಿ ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ ಬಾಲಕರ ಮೇಳದೊಳಗಿದ್ಯಲ್ಲೊ ರಂಗ || ಕಲ್ಲುಮಣೆ ಕವಡೆ ಚನ್ನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನುಜ ಶರೀರವಿದೇನು ಸುಖ?

(ರಾಗ ಬೆಹಾಗ್. ಝಂಪೆ ತಾಳ) ಮನುಜ ಶರೀರವಿದೇನು ಸುಖ , ಇದು ನೆನೆದರೆ ಘೋರವಿದೇನು ಸುಖ || ಜನನ ಮರಣ ಮಲದ ಕೂಪದಲಿದ್ದು ಅನುಭವಿಸುವುದಿದೇನು ಸುಖ ತನುವಿದ್ದಾಗಲೆ ಹೃದಯದ ಶೌಚದ ಸ್ತನಗಳಂಬುವುದೇನು ಸುಖ || ದಿನದಿನ ಹಸಿ ತೃಷೆ ಘನ ಘನ ರೋಗದೊ= ಳನುಭವಿಸುವುದು ಅದೇನು ಸುಖ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳ ಮಾರಮಣಗೆ

(ರಾಗ ಸೌರಾಷ್ಟ್ರ. ಅಟ ತಾಳ) ಮಂಗಳ ಮಾರಮಣಗೆ ಮಂಗಳ ಭೂರಮಣಗೆ ಜಯ ಮಂಗಳ ನಿತ್ಯ ಶುಭ ಮಂಗಳ || ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್ಕೆ ಮಂಗಳ ಸೂಕರರೂಪಕೆ ನಖಕೆ ಮಂಗಳ ಮುದ್ದು ನರಸಿಂಹಗೆ || ವಕ್ಷಕ್ಕೆ ಮಂಗಳ ವಟುವಾಮನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು