ಹರಿ ಕೃಪೆಯಲಿ ತಾನೊಲಿದದ್ದಾದರೆ

(ರಾಗ ಧನಶ್ರೀ. ಆದಿ ತಾಳ ) ಹರಿ ಕೃಪೆಯಲಿ ತಾನೊಲಿದದ್ದಾದರೆ ಉರುತರ ಮೋಕ್ಷವೆ ಸಾಕ್ಷಿ ||ಪ|| ಹರಿ ಶರಣರ ಸೇವಿಸುವ ನರರಿಗೆ ಧರೆಯ ಸೌಖ್ಯವೆ ಸಾಕ್ಷಿ ||ಅ. ಪ|| ಮಡದಿ ಮಕ್ಕಳ ಸಾಕದೆ ಬಿಡುವಗೆ ಕಡು ದಾರಿದ್ರ್ಯವೆ ಸಾಕ್ಷಿ ಕಡು ಬಡವಗೆ ಧರ್ಮವ ಕೊಡದಿರೆ ಬಾಯಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ

(ರಾಗ ಪೂರ್ವಿ. ಝಂಪೆ ತಾಳ ) ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕೆ ಬಾಯಿ ಬಿಡುವ್ಯಲ್ಲೊ ಪ್ರಾಣಿ ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿದಿನದಲಿ ಉಂಡ ನರರಿಗೆ

(ರಾಗ ಕಾಂಭೋಜಿ. ಆದಿ ತಾಳ ) ಹರಿ ದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ ಗೋವು ಕೊಂದ ಪಾಪ ವಿಪ್ರರ ಸಾವಿರ ಜೀವ ಹತ್ಯವ ಮಾಡಿದ ಪಾಪವು ಭಾವಜನಯ್ಯನ ದಿನದಿ ಉಂಡವರನು ಕೀವಿನೊಳಗೆ ಹಾಕಿ ಕುದಿಸುವ ಯಮನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಭಕುತಿ ಉಳ್ಳವರ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ ) ಹರಿ ಭಕುತಿ ಉಳ್ಳವರ ಶರೀರವೆ ಕುರುಕ್ಷೇತ್ರ ||ಪ|| ಅವರು ನರರೆಂದು ಬಗೆವವರೆ ನರಕವಾಸಿಗಳು ||ಅ.ಪ|| ಸದಮಲನ ನೆನೆಸುವ ಹೃದಯ ಕಾಶೀಪುರವು ಮಧುವೈರಿ ನೆನೆವೆ ಮನ ಮಣಿಕರ್ಣಿಕೆ ಪದುಮನಾಭನ ಪಾಡ್ವ ವದನವೇ ವೈಕುಂಠ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹನುಮನ ಮನೆಯವರು ನಾವು

ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಪಲ್ಲವಿ|| ಊರ್ಧ್ವಪುಂಡ್ರವ ನೋಡಿ, ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನು ನೋಡಿ ಇದ್ದುದನಿಲ್ಲೆಂದು ಅಪದ್ಧ ನುಡಿವರಲ್ಲಾ ಮಧ್ವ ಮುನಿಯು ನಮ್ಮ ತಿದ್ದಿರುವುದ ನೋಡಿ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ರಾಗ: ರೇಗುಪ್ತಿ ತಾಳ: ಛಾಪ ಎಲ್ಯಾಡಿ ಬಂದ್ಯೋ ನೀ ಹೇಳಯ್ಯ ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ|| ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ ಹೊಸಪರಿ ಸುದ್ದಿಯು ಹುಟ್ಟಿದೆ ಪುಸಿಯಲ್ಲ ಈ ಮಾತು ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಎಲ್ಯಾಡಿ ಬಂದ್ಯೊ ಎನ್ನ ರಂಗಯ್ಯಾ ನೀ

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಮಂಗಳ ಶ್ರೀ ತುಳಸಿದೇವಿಗೆ

ಪಲ್ಲವಿ: ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆ ಚರಣ ೧: ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡುವ ಗುಣವಂತೆಗೆ ಚರಣ ೨:
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೆ ಬರುವದೆ ಮುಕ್ತಿ

(ರಾಗ ಆನಂದಭೈರವಿ ಅಟ ತಾಳ) ಸುಮ್ಮನೆ ಬರುವದೆ ಮುಕ್ತಿ ||ಪ|| ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ ||ಅ.ಪ|| ಮನದಲ್ಲಿ ದೃಢವಿರಬೇಕು, ಪಾಪಿ ಜನರ ಸಂಸರ್ಗವ ನೀಗಲುಬೇಕು ಅನುಮಾನವನು ಬಿಡಬೇಕು, ತನ್ನ ತನು ಮನಧನವನೊಪ್ಪಿಸಿಕೊಡಬೇಕು ಕಾಮಕ್ರೋಧವ ಬಿಡಬೇಕು, ಪರ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೋಹಮೆನ್ನ ಬೇಡವೋ

(ರಾಗ ಅಠಾಣ ಅಟತಾಳ) ಸೋಹಮೆನ್ನ ಬೇಡೆಲೋ, ದಾ- ಸೋಹಮೆಂದು ಪೇಳೆಲೋ ||ಪ|| ಸೋಹಮೆಂಬೋ ಜ್ಞಾನದಿಂದ ಸಾಯಲಿಲ್ಲೇ ಹಿರಣ್ಯಕ, ದಾ- ಸೋಹಮೆಂಬ ಪ್ರಹ್ಲಾದ ದೇಹ ನಿತ್ಯ ಮುಕ್ತನಾದ ||ಅ.ಪ|| ನಾನೇ ದೈವವೆಂಬ ಮಾಲಿ ಸುಮಾಲಿ ರಾವಣ ದುಷ್ಟರು ದಾನವಾರಿ ಹರಿಯ ಜರೆದು ಹೇಗೆ ಪ್ರಾಣ ಬಿಟ್ಟರು
ದಾಸ ಸಾಹಿತ್ಯ ಪ್ರಕಾರ
ಬರೆದವರು