ಸ್ಮರಣೆ ಒಂದೇ ಸಾಲದೆ

ಸ್ಮರಣೆ ಒಂದೇ ಸಾಲದೆ

(ರಾಗ ರೇಗುಪ್ತಿ ರೂಪಕ ತಾಳ) ಸ್ಮರಣೆ ಒಂದೇ ಸಾಲದೆ , ಗೋವಿಂದನ ನಾಮ ಒಂದೇ ಸಾಲದೆ ||ಪ|| ಪರಮ ಪುರುಷನನ್ನು ನೆರೆ ನಂಬಿದವರಿಗೆ ದುರಿತ ಬಾಧೆಗಳ ಗುರುತು ತೋರುವುದೆ ||ಅ.ಪ|| ಕಡು ಮೂರ್ಖನಾದರೇನು, ದುಷ್ಕರ್ಮದಿಂ ತೊಡೆದಾತನಾದರೇನು ಜಡನಾದರೇನಲ್ಪಜಾತಿಯಾದರೇನು ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ || ಪಾತಕಿಯಾದರೇನು, ಸರ್ವಪ್ರಾಣಿ ಘಾತಕಿಯಾದರೇನು ನೀತಿಯ ಬಿಟ್ಟು ದುಷ್ಕರ್ಮಿಯಾದರೇನು ಪ್ರೀತಿಯಿಂದಜಾಮಿಳನ ಸಲಹಿದ ಹರಿಯ || ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ ಪ್ರಕಟಪುರಂದರವಿಠಲನ ನಾಮದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು