ಶ್ರೀನಿವಾಸ ನೀನೇ ಪಾಲಿಸೋ

ಶ್ರೀನಿವಾಸ ನೀನೇ ಪಾಲಿಸೋ

(ರಾಗ ಆನಂದಭೈರವಿ ಆದಿ ತಾಳ) ಶ್ರೀನಿವಾಸ ನೀನೇ ಪಾಲಿಸೋ, ಶ್ರಿತಜನ ಪಾಲ ಗಾನಲೋಲ ಶ್ರೀ ಮುಕುಂದನೇ ||ಪ|| ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ ||ಅ.ಪ|| ಎಂದಿಗೆ ನಿನ್ನ ಪಾದಾಬ್ಜವ , ಪೊಂದುವ ಸುಖ ಎಂದಿಗೆ ಲಭ್ಯವೋ ಮಾಧವ ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೊ ಮುಕುಂದ || ಎಷ್ಟು ದಿನ ಕಷ್ಟಪಡುವುದೊ , ಯಶೋದೆಕಂದ ದೃಷ್ಟಿಯಿಂದ ನೋಡಲಾಗದೆ ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ ಪಿಡಿದು || ಅನುದಿನ ಅನೇಕ ರೋಗಂಗಳ , ಅನುಭವಿಸುವೆನು ಘನ ಮಹಿಮನೆ ಕೇಳಯ್ಯ ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ ಹನುಮದೀಶ ಪುರಂದರವಿಠಲನೇ ಕೈಯ ಪಿಡಿದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು