ಏನಾದರು ಒಂದಾಗಲಿ

( ರಾಗ ನಾದನಾಮಕ್ರಿಯ. ಛಾಪು ತಾಳ) ಏನಾದರು ಒಂದಾಗಲಿ ||ಪ|| ನೂರೆಂಟು ದೇವರು ಮೊರ ತುಂಬ ಕಲ್ಲೆ ||ಅ|| ಮನೆಯ ಗಂಡ ಮಾಯವಾಗಲಿ ಉಣ ಬಂದ ಮೈದುನ ಒರಗಲಿ ಘನ ಅತ್ತಿಗೆ ನಾದಿನಿ ಸಾಯಲಿ ನೆರೆ ಮನೆ ಹಾಳಾಗಿ ಹೋಗಲೊ ಹರಿಯೆ || ಅತ್ತೆಯ ಕಣ್ಣೆರಡು ಇಂಗಲಿ ಮಾವನ ಕಾಲೆರಡು ಮುರಿಯಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನ ಹೇಳಲೆ ನಾನು ಕೃಷ್ಣನ ಮಹಿಮೆ

( ರಾಗ ಕಲ್ಯಾಣಿ. ಅಟ ತಾಳ) ಏನ ಹೇಳಲೆ ನಾನು ಕೃಷ್ಣನ ಮಹಿಮೆ ಯಾರಿಗೂ ತಿಳಿದನಮ್ಮ ||ಪ|| ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತಿದ್ದಳು ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಪೋದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಳ್ಳುಕಾಳಿನಷ್ಟು ಭಕುತಿ

( ರಾಗ ತೋಡಿ. ರೂಪಕ ತಾಳ) ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||ಪ|| ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ ಮಂಡೆಶೂಲೆಯಲ್ಲದೆ ಗತಿಯು ಇಲ್ಲ ಮಂಡೂಕನಂದದಿ ಕೆರೆಯ ದಂಡೆಯ ಮೇಲೆ ಕುಳಿತುಕೊಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡವೆ ನೀನು ಹೀಗೆ.

( ರಾಗ ಕೇದಾರಗೌಳ. ಅಟ ತಾಳ) ಬೇಡುವೆ ನೀನು ಹೀಗೆ ಕಾಡುವ ಕೃಷ್ಣನ ಕರೆದು ಬುದ್ಧಿಯ ಹೇಳೆ ||ಪ|| ಎಣ್ಣೆ ಮಂಡೆಯಲಿ ಬಣ್ಣ ಬಚ್ಚಲೊಳಗಿರೆ ಬಣ್ಣಿಸಿ ನೆರೆವೆನೆಂದು ಚದುರತೆಯಿಂದ ಬೆನ್ನನೊರೆಸಲು ಬಂದು , ಬೆದರುವಳ ತನುವ ತಕ್ಕೈಸಿ ನಿಂದು ಗೋಪ್ಯಮ್ಮ ಕೇಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡ ಮನವೆ ಬೇಡಿಕೊಂಬೆನೊ ನಾನು

( ರಾಗ ಕಾಂಭೋಜ. ಆದಿ ತಾಳ) ಬೇಡ ಮನವೆ ಬೇಡಿಕೊಂಬೆನೊ ನಾನು ಕಾಡದಿರು ಕಪಟದಿ ಮನವೆ ||ಪ|| ಮಾಡದಿರು ಮತ್ಸರವ ಪರರಿಗೆ ತನ್ನವರಿಗೆ ಕೇಡನೆಣಿಸಲು ಬೇಡ ಮನವೆ ||ಅ|| ಸಿಟ್ಟಿನಿಂದೊಬ್ಬರನು ಕೆಟ್ಟನುಡಿಯಲು ಬೇಡ ನಿಟ್ಟು ಮುನಿವರು ಕೇಳು ಮನವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ

ರಾಗ - ಹಿಂದುಸ್ತಾನಿ ತಾಳ - ಕಾಪಿ ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ|| ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ|| ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಚೆಲುವಗೆ ಮಗಳನು ಕೊಟ್ಟನು

ಎಂಥಾ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ || ಪಲ್ಲವಿ || ಕಂತುಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮಾ || ಅನು ಪಲ್ಲವಿ || ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯ ಧರಿಸಿದ ಉರಗಭೂಷಣನ ನೋಡಮ್ಮಮ್ಮಾ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೋಪು ಹೋಗೋಣ ಬಾರೊ ರಂಗ

ರಾಗ: ಧನ್ಯಾಸಿ ಆದಿ ತಾಳ ಪೋಪು ಹೋಗೋಣ ಬಾರೊ ರಂಗ ಪೋಪು ಹೋಗೋಣ ಬಾರೊ ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ಕುಂಡಿನೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ ಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆ ರಾಜರ

ರಾಗ ಭೈರವಿ/ಅಟ್ಟ ತಾಳ ಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ || ಕಂಡೆ ಕಂಡೆನು ಕರುಣ ನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡ ಒಡೆಯಲು ದ್ದಂಡ ಮಾರುತಿಪದಕೆ ಬರುವನ || ೧ || ಪಂಚ ವೃಂದಾವನದಿ ಮೆರೆಯುವ ಪಂಚಬಾಣನ ಪಿತನ ಸ್ಮರಿಸುತ ಪಂಚನಂದನ ಮುಂದೆ ಆಗುತ
ದಾಸ ಸಾಹಿತ್ಯ ಪ್ರಕಾರ
ಬರೆದವರು