ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ|| ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ ಬಾಲಕರನು ಬಡೆವನಮ್ಮ ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ|| ಸಣ್ಣವನಾಗಿ ತೋರುವನಮ್ಮ, ಪಾಲ್- ಬೆಣ್ಣೆ ಮೊಸರು ಕದಿವನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವಕಿನಂದನ ಹರಿ ವಾಸುದೇವ

( ರಾಗ ಸಾರಂಗ. ಆದಿ ತಾಳ) ದೇವಕಿನಂದನ ಹರಿ ವಾಸುದೇವ ದೇವಕಿನಂದನ ಹರಿ ವಾಸುದೇವ ||ಪ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸ ವಾಹನ ಮುಖ ವಂದಿತ ಚರಣ || ಶಂಖ ಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ || ಮಕರಕುಂಡಲಧರ ಶತರವಿಭಾಸ ರುಕುಮಿಣಿವಲ್ಲಭ ಸಕಲಲೋಕೇಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ್ಯನಾದೆ ನಾನೀ ಜಗದೊಳು

( ರಾಗ ರೇಗುಪ್ತಿ. ಆದಿ ತಾಳ) ಧನ್ಯನಾದೆ ನಾ-ನೀ ಜಗದೊಳು ಧನ್ಯನಾದೆ ನಾ ||ಪ|| ಪನ್ನಗ ಶಯನನ ಕಣ್ಣಿನಿಂದಲಿ, ಕಂಡು ಧನ್ಯನಾದೆ ನಾ ||ಅ|| ಉನ್ನತಮಹಿಮ ಪಾ-ವನ್ನಚರಿತ ಸುರಸನ್ನುತಚರಂಅನವ ಪನ್ನಗಾರಿವ-ಹನ್ನ ಪುರುಷರನ್ನ, ಚೆನ್ನಿಗ ಶ್ರೀರಂಗನ ಮಹಿಮೆಯ, ಕಂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸ ಶೇಷಾದ್ರಿವಾಸ

( ರಾಗ ತೋಡಿ. ಅಟ ತಾಳ) ದಾಸ ಶೇಷಾದ್ರಿವಾಸ ತಿಮ್ಮಪ್ಪನ, ದಾಸರನ ಕರೆದೊಯ್ದು ಸಾಸಿರನಾಮ ವಿಲಾಸ ಮೂರ್ತಿಯ , ಲೇಸಾಗಿ ತೋರೆನಗೆ ||ಪ|| ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ, ಶಿರದಲಂಧದ ದೇವನ ಉರುವ ಶಾಪಕೆ ತಾನು ಕಿರಿದಾಗಿ ಇರುವನ, ಶರದೊಳು ಧರಿಸಿದವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರಿಯೇನಿದಕೆ ಮುರಾರಿ

( ರಾಗ ಕಾಮವರ್ಧಿನಿ/ಪಂತುವರಾಳಿ. ಅಟ ತಾಳ) ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ ||ಪ|| ಕಷ್ಟ ಕರ್ಮಂಗಳ ಎಷ್ಟಾದರು ಮಾಳ್ಪೆ, ನಿಷ್ಠೂರ್‍ಅ ನುಡಿಗೆ ಗುರು ಹಿರಿಯರ ದುಷ್ಟರ ಸಂಗವ ಬಹಳ ಮಾಡಿದರಿಂದ, ಶ್ರೇಷ್ಠರ ಸೇವೆಯೆಂದರೆ ಆಗದೆನಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರಿಯ ತೋರೊ ಮುಕುಂದ

( ರಾಗ ಪೂರ್ವಿ. ಏಕ ತಾಳ) ದಾರಿಯ ತೋರೊ ಮುಕುಂದ , ನಾರಾಯಣ ಹರಿ ಗೋವಿಂದ ||ಪ|| ಬಂದೆನು ನಾನಾ ಜನ್ಮದಲಿ, ಬಹು, ಬಂಧನದೊಳು ಸಿಲುಕಿದೆನೊ ಮುಂದಿನ ಪಯಣದ ಗತಿಯೇನೊ, ಇಂದು ನೀ ತೋರೋ ಇಂದಿರೆರಮಣನೆ || ಉಕ್ಕಿ ಹರಿವ ನದಿಯೊಳಗೆ, ನಾ ,ಸಿಕ್ಕಿದೆ ನಡು ನೀರೊಳಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿತ್ತ ಶುದ್ಧಿಯಿಲ್ಲದ ಮನುಜ

( ರಾಗ ಮುಖಾರಿ. ಝಂಪೆ ತಾಳ) ಚಿತ್ತ ಶುದ್ಧಿಯಿಲ್ಲದ ಮನುಜ ಜ್ಞಾನಿಯೇ ||ಪ|| ಪಾಪ, ಹೊತ್ತು ಕಳೆಯದಂಥ ನರ ಮನುಜನೆ ||ಅ|| ಬಂಧನದೊಳಿಹ ವ್ಯಾಘ್ರ ಅದು ಬಹು ತಪಸ್ವಿಯೇ ಸಿಂಧುವಿನೊಳಿಹ ನೊರೆ ಸಿತಕರಣವೇ ಅಂಧಕನು ಕಣ್ಣು ಮುಚ್ಚಲು ಯೋಗಸಾಧನವೇ ಮಂದಮತಿ ಸುಮ್ಮನಿರಲದು ಮೌನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಛೀ ಛೀ ಏತರ ಜನ್ಮ

( ರಾಗ ಪೂರ್ವಿ. ಆದಿ ತಾಳ) ಛೀ ಛೀ ಏತರ ಜನ್ಮ ,ತಿಳಿಯೋ ನೀತಿ ಧರ್ಮ ನೀತಿ ತಪ್ಪಿ ನಡೆವ ಮನುಜುನ ಬಾಯಲಿ ಬಿತ್ತೋ ಬೂದಿ || ಪ|| ಪುರಾಣ ಹೇಲುವ ಪುಂಡ, ಅವ ಮಧ್ಯ ಹರವಿಯ ಕೊಂಡ ಮುಂದುಗಾಣದೆ ಮೋಕ್ಷವ ಬೊಗಳುವ ಬರಿಯ ಮಾತಿನ ಭಂಡ || ತೀರ್ಥ ಯಾತ್ರೆಯನೆಲ್ಲ ತಿರುಗಿ ಸೊರಗಿದೆನಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಂದ್ರಗಾವಿಯನಿಟ್ಟು.

( ರಾಗ ಆರಭಿ. ಅಟ ತಾಳ) ಚಂದ್ರಗಾವಿಯನಿಟ್ಟು ದುಂಡು ಮುತ್ತನೆ ಕಟ್ಟಿ ಪಿಂಡ್ಯಾದ ರುಳಿಯನಿಟ್ಟು ಗೆಂಗಾವಿನ ಹಾಲ ಹರವಿಯೊಳಿಟ್ಟುಕೊಂಡು ಬಂದಳೆ ಕೇರಿಗಾಗಿ ||೧|| ಸಂಜೆರಾಘವನುಟ್ಟು ಸಂಜನೋಲೆಯನಿಟ್ಟು ಪಂಜರದರಗಿಣಿಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಂದವ ನೋಡಿರೆ

( ರಾಗ ಮುಖಾರಿ. ಅಟ ತಾಳ) ಚಂದವ ನೋಡಿರೆ ಗೋಕುಲ- ನಂದನ ಮೂರುತಿಯ ||ಪ|| ಅಂದುಗೆ ಪಾಡಗ ಗೆಜ್ಜೆಯ ಧರಿಸಿ ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ|| ಕೊರಳ ಪದಕ ಹಾರ ಬಿಗಿದು ತರಳರೆಲ್ಲರ ಕೂಡಿಕೊಂಡು ಕುರುಳುಗೂದಲು ಅರಳೆಲೆಯ ಥಳಥಳಿಸುತ ಮೆರೆವ ಕೃಷ್ಣನ || ಉಡಿಯ ಘಂಟೆ ಘಳಿಲೆನುತ
ದಾಸ ಸಾಹಿತ್ಯ ಪ್ರಕಾರ
ಬರೆದವರು