ಏನಾದರು ಒಂದಾಗಲಿ

ಏನಾದರು ಒಂದಾಗಲಿ

( ರಾಗ ನಾದನಾಮಕ್ರಿಯ. ಛಾಪು ತಾಳ) ಏನಾದರು ಒಂದಾಗಲಿ ||ಪ|| ನೂರೆಂಟು ದೇವರು ಮೊರ ತುಂಬ ಕಲ್ಲೆ ||ಅ|| ಮನೆಯ ಗಂಡ ಮಾಯವಾಗಲಿ ಉಣ ಬಂದ ಮೈದುನ ಒರಗಲಿ ಘನ ಅತ್ತಿಗೆ ನಾದಿನಿ ಸಾಯಲಿ ನೆರೆ ಮನೆ ಹಾಳಾಗಿ ಹೋಗಲೊ ಹರಿಯೆ || ಅತ್ತೆಯ ಕಣ್ಣೆರಡು ಇಂಗಲಿ ಮಾವನ ಕಾಲೆರಡು ಮುರಿಯಲಿ ಹಿತ್ತಲ ಗೋಡೆಯು ಬೀಳಲಿ ಕಾಡ ಕತ್ತಲೆಯಾದರು ಕವಿಯಲೊ ಹರಿಯೆ || ಕಂದನ ಕಣ್ಣೆರಡು ಮುಚ್ಚಲಿ ಚಂದವಾದ ಹಾವು ಕಚ್ಚಲಿ ದ್ವಂದಾರ್ಥಗಳೆಲ್ಲ ಬಿಚ್ಚಲಿ ಪು- ರಂದರವಿಠಲನು ಮೆಚ್ಚಲೊ ಹರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು