ದಾರಿ ಯಾವುದಯ್ಯ ವೈಕುಂಠಕ್ಕೆ

( ರಾಗ ಕಲ್ಯಾಣಿ. ಅಟ ತಾಳ)

 

ದಾರಿ ಯಾವುದಯ್ಯ ವೈಕುಂಠಕ್ಕೆ

ಹಾದಿ ತೋರಿಸಯ್ಯ ||ಪ||

ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ-

ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ||ಅ||

 

ಬಲು ಭವದನುಭವದಿ ಕತ್ತಲೆಯೊಳು

ಬಲು ಅಂಜುತೆ ನಡುಗಿ

ಬಳಲುತ ತಿರುಗಿದೆ ಹಾದಿಯ ಕಾಣದೆ

ಹೊಳೆವಂಥ ದಾರಿಯ ತೋರೊ ನಾರಾಯಣ ||

 

ಪಾಪ ಪೂರ್ವದಲ್ಲಿ ಮಾಡಿದುದಕೆ

ಲೇಪವಾಗಿದೆ ಕರ್ಮ

ಈ ಪರಿಯಿಂದಲಿ ನಿನ್ನ ನೆನಸಿಕೊಂಬೆ

ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||

 

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ

ನಿನ್ನ ದಾಸನಾದೆನೋ

ಪನ್ನಗ ಶಯನ ಶ್ರೀ ಪುರಂದರವಿಠಲ

ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರ ಮಗ ಎಲೆ ಗೋಪಿ

( ರಾಗ ಸೌರಾಷ್ಟ್ರ. ಅಟ ತಾಳ)

 

ದಾರ ಮಗ ಎಲೆ ಗೋಪಿ, ದಾರ ಮಗನೆ

ಒರಳನೆಳೆಯುತಂಬೆಕಾಲನಿಕ್ಕುತ ಬಹವ || ಪ||

 

ಕಿರುಜಡೆ ಮುಂಗುರುಳು ಅರಳಲೆ ಮಾಗಾಯಿ

ಹಾರ ಹೀರ ಕೌಸ್ತುಭ ಸರವ ಹಾಕಿದವನಿವ ||

 

ಕೊರಳ ಹುಲಿಯುಗುರು ಶ್ರೀಗಂಧ ತುಳಸಿ

ಸುರರ ಸೋಲಿಪ ಮುದ್ದು ಸುರಿದು ನಲಿದಾಡುವ ||

 

ಕರುಣಾಕರ ವರದ ಪುರಂದರವಿಠಲ

ವರ ಭಾಗವತರ ಕೇರಿಯೊಳ್ ನಲಿದಾಡುತ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪಾಪಿ ದೃಷ್ಟಿ ತಾಗಿತು

( ರಾಗ ಆನಂದಭೈರವಿ. ಆದಿ ತಾಳ) ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ ಕೆಟ್ಟ ಪಾಪಿ ದೃಷ್ಟಿ ತಾಗಿತು || ಶಿಶು ಹಸಿದನೆಂದು ಗೋಪಿ ಮೊಸರು ಕುಡಿಸುತ್ತಿರಲು ನೋಡಿ ಹಸಿದ ಬಾಲರ ದೃಷ್ಟಿ ತಾಗಿ ಮೊಸರು ಕುಡಿಯಲೊಲ್ಲನೆ || ಕೃಷ್ಣ ಹಸಿದನೆಂದು ಗೋಪಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಬಿಟ್ಟು ನೀನಗಲದೆ

( ರಾಗ ಮಂಚಿ. ಛಾಪು ತಾಳ) ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ||ಪ|| ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ ದೀಪದ ಬೆಳಕಲ್ಲಿ, ಸನಕಾದಿ ವಂದ್ಯ ನೀ ಬೇಗ ಬಾರೋ || ಪಂಚರಿವರು ಯಾವಾಗಲೂ, ಹೊಂಚ್ಹಾಕಿ ಎನ್ನನು ನೋಡುತಾರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬುದ್ಧಿ ಹೇಳೆ ಗೋಪಿ

( ರಾಗ ಪುನ್ನಾಗವರಾಳಿ. ಅಟ ತಾಳ)

 

ಬುದ್ಧಿ ಹೇಳೆ ಗೋಪಿ ನಿನ್ನ ಮುದ್ದು ಕಂದಗೆ ||ಪ||

ಸದ್ದು ಮಾಡದ್ಹಾಗೆ ಬಂದು ಮುದ್ದನಿಟ್ಟು ಪೋದನಮ್ಮ ||ಅ||

 

ಗಂಧ ಕಸ್ತೂರಿ ಪುನುಗು ಚಂದದಿಂದ ಪೂಸಿಕೊಂಡು

ಮಂದಹಾಸದಿಂದ ಬಂದ ಇಂದಿರೇಶನು

ಸಿಂಧುಶಯನ ತಾ ಬಂದು ಮಂದಿರದೊಳಗೆ ಪೊಕ್ಕು

ಸಂದುಗೊಂದುಗಳ ಹುಡುಕಿ ಸರಸವಾಡಿ ಪೋದನಮ್ಮ ||

 

ಚಪ್ಪರಮಂಚದ ಮೇಲೆ ತಪ್ಪಿ ನಾ ಮಲಗಿರೆ

ಸಪ್ಪಳವಾಗದ್ಹಾಗೆ ಬಂದು ಅಪ್ಪಿಕೊಂಡನೆ

ಕುಪ್ಪಸದಲಿ ಕೈಯನಿಕ್ಕಿ ಕಕ್ಕಸ ಕುಚಗಳ ಪಿಡಿದು

ತಪ್ಪು ಕಾರ್ಯ ಮಾಡಿ ಅಧರ ಚಪ್ಪರಿಸಿ ಪೋದನಮ್ಮ ||

 

ಸುಳ್ಳು ಅಲ್ಲವೆ ನಮ್ಮ ಮಾತು ವಲ್ಲಭೆ ಕೇಳೆ ಗೋಪ್ಯಮ್ಮ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತೀಶನೆ ಎನ್ನ

( ರಾಗ ಮಧ್ಯಮಾವತಿ. ತ್ರಿಪುಟ ತಾಳ) ಭಾರತೀಶನೆ ಎನ್ನ ಭವಜನಿತ ದುಃಖವ ದೂರ ಮಾಡುತಿ ಘನ್ನ ಸನ್ನುತವರೇಣ್ಯ ||ಪ|| ವಾರವಾರದಿ ಭಜಿಪೆ ನಿನ್ನ ಮುರಾರಿ ವಾರಿಜ ಪದದಿ ಎನ ಮನ ಸೇರಿ ಶಾಂತದಿ ಮುಕುತಿ ಪದವನು ತೋರಿ ಪೊರೆ ಕರುಣಾಳು ಉತ್ತಮ ||ಅ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬ್ರಾಹ್ಮಣನೆಂದರೆ

( ರಾಗ ಭೈರವಿ. ಆದಿ ತಾಳ) ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನವನೀಗ ಬ್ರಾಹ್ಮಣನೋ||ಪ|| ಬ್ರಹ್ಮ ಭೇದವೆಂದು ಜಗವನ್ನು ಕಂಡವನವನೀಗ ಬ್ರಾಹ್ಮಣನೋ ||ಅ|| ಮೂಗಲ್ಲಿ ವಾಯು ತುಂಬಿ ಎಳೆಯೋವ ಅವನೀಗ ಬ್ರಾಹ್ಮಣನೋ ನಾಗಸ್ವರನ ಧ್ವನಿ ಕಿವಿಯಲ್ಲಿ ಕೇಳೋವ ಅವನೀಗ ಬ್ರಾಹ್ಮಣನೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾಷೆಹೀನರ

( ರಾಗ ಮುಖಾರಿ. ಝಂಪೆ ತಾಳ) ಭಾಷೆಹೀನರ ಸಂಗವಭಿಮಾನಭಂಗ ||ಪ|| ಬೇಸತ್ತು ಬೇಲಿಯ ಮೇಲೊರಗಿದಂತೆ ||ಅ|| ಹಸಿವೆಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ ತೃಷಿವಿಗಾರದೆ ಕೂಪ ತೋಡಿದಂತೆ ಬಿಸಿಲಿಗಾರದೆ ಕೋತಿ ಬಂಡೆ ಮೇಲೆ ಕುಳಿತಂತೆ ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾ ಗುಮ್ಮ ಬಂದಂಜಿಸು ಗುಮ್ಮ

(ರಾಗ ಕೇದಾರಗೌಳ. ಅಟ ತಾಳ) ಬಾ ಗುಮ್ಮ ಬಂದಂಜಿಸು ಗುಮ್ಮ || ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆ ಪುನುಗು ಜವ್ವಾಜಿ ಕಸ್ತೂರಿ ಲೇಪಿಸಿರೆ ತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡು ಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು