ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು|| ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿಸಿ ಮೋದದಿಂದ ಭಜಿಸುವೆನು ||೧|| ಭಕ್ತಿ ರಸವೆಂಬ ಮುದ್ದು ಮಾಣಿಕ್ಯದ ಹರಿವಾಣದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾ ಬಾ ರಂಗ ಭುಜಂಗಶಯನ

( ರಾಗ ಕೇದಾರಗೌಳ. ಆದಿ ತಾಳ) ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ ||ಪ|| ಬಾ ಬಾ ಎನ್ನಂತರಂಗ ಮಲ್ಲರ ಗಜಸಿಂಗ ದುರಿತಭವ ಭಂಗ ||ಅ|| ಉಭಯ ಕಾವೇರಿಯ ಮಧ್ಯನಿವಾಸ ಅಭಯದಾಯಕ ಮಂದಹಾಸ ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ ಇಭವರದನೆ ಶ್ರೀನಿವಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಚ್ಯುತಾನಂತ ಗೋವಿಂದನೆಂಬ

(ಉದಯರಾಗ ಛಾಪು ತಾಳ) ಅಚ್ಯುತಾನಂದ ಗೋವಿಂದನೆಂಬ ವಸ್ತು ಎನ್ನ ಕೈಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೊ ಪರವಸ್ತು ಎನ್ನ ಕೈ ಸೇರಿತು ||ಅ|| ವೆಚ್ಚವ ಮಾಡಲಾಗದು ಇದು ಮುಚ್ಚಿ ಬಚ್ಚಿಡಲಾಗದು ಹೊತ್ತಾರೆದ್ದು ಕೀರ್ತನೆ ಮಾಡುವ ವಸ್ತು ಎನ್ನ ಕೈ ಸೇರಿತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಚಾರಿಯರೆಂಬವರ

( ರಾಗ ಮುಖಾರಿ. ಅಟ ತಾಳ) ಆಚಾರಿಯರೆಂಬವರ ಇವರ ನೋಡಿ || ಆಚಾರ ಬಲ್ಲವರೆ ಆಚಾರ್ರು || ಆ ಎಂದರೆ ಅತಿ ತತ್ವವ ತಿಳಿದವರು ಅದ್ವೈತ ಮತ ಧ್ವಂಸ ಮಾಡುವರು ಅತಿಥಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು ಆಯುತ ವೃತ್ತಿಯನ್ನೆ ಮಾಡುವರು || ಚಾ ಎಂದರೆ ಚಂಚಲಾತ್ಮವನೆ ಅಳಿದವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆದಿಯಲಿ ಗಜಮುಖನ

( ರಾಗ ನಾಟ) ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ ಮೋದದಿಂ ಸಲಿಸುವ ಮನದಿಷ್ಟವ ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ ಮಾಧವನೇ ನೇಮಿಸಿಪ್ಪ ಈಯಧಿಕಾರವ ಆದರದಿಂದ ಅವರವರೊಳು ನಿಂದು ಕಾರ್ಯಗಳ ಭೇದಗೊಳಿಸದೆ ಮಾಳ್ಪ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಡಿಸು ನೀ ಬಾರೋ ಹರಿಗೋಲ್ಹಾಕಿಸು

( ರಾಗ ಧನಶ್ರೀ. ಆದಿ ತಾಳ) ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ ||ಪ|| ಮಿತ್ರೇರಾಡಿದ ಮಾತನು ಕೇಳಿ ಶ್ರೀ ಕೃಷ್ಣನು ತಾ ಬಂದ ||ಅ|| ಹುಟ್ಟನೆ ತೆಗೆದು ಹೆಗಲಲ್ಲಿಟ್ಟು ಥಟ್ಟನೆ ಕೈ ಕೊಟ್ಟ ನೀರು ತುಂಬಿತು ನಾವೆಯೊಳಗೆ ಕೇಳೋ ಅಂಬಿಗನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಡಿದನೋಕುಳಿಯ

( ರಾಗ ಪೂರ್ವಿ. ಅಟ ತಾಳ) ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ|| ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ || ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ ಬಂದರು ಹೊರಗಿನ್ನಾರೇರಾಡುತಂದಚೆಂದದಿ ಓಕುಳಿಯ|| ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದೇ ನಿರ್ಣಯಿಸಿದರು

( ರಾಗ ಮೋಹನ. ಆದಿ ತಾಳ) ಅಂದೇ ನಿರ್ಣಯಿಸಿದರು ಕಾಣೋ ಇಂದಿರಾಪತಿ ಪರದೈವವೆಂದು ||ಪ|| ಅಂದು ಚತುರ್ಮುಖ ನಾರದನಿಗೆ ತಮ್ಮ ತಂದೆ ಶ್ರೀಹರಿ ಪರದೈವವೆಂದು ಸಂದೇಹವ ಪರಿಹರಿಸಿದ ದ್ವಿತೀಯ ಸ್ಕಂಧದೊಳೈದಧ್ಯಾಯದಲಿ|| ವೇದೋಪಾಸ್ಯಕ ವೇದ ವಿಧಾಯಕ ವೇದಾತೀತಾನವನಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವನಾವನು ಕಾಯ್ವ

( ರಾಗ ಕಾಂಭೋಜ. ರೂಪಕ ತಾಳ) ಆವನಾವನು ಕಾಯ್ವ ಅವನಿಯೊಳಗೆ ||ಪ|| ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||ಅ|| ಆವ ತಂದೆಯು ಸಲಹಿದನು ಪ್ರಹ್ಲಾದನ್ನ ಆವ ತಾಯಿಯು ಸಲಹಿದಳು ಧ್ರುವನ ಆವ ಸೋದರರು ಈಡೇರಿಸಿದರು ವಿಭೀಷಣನ ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರ ಮಗನೆಂದರಿಯೆವೆ ಇವ

( ರಾಗ ಭೈರವಿ. ಝಂಪೆ ತಾಳ) ಆರ ಮಗನೆಂದರಿಯೆವೆ ಇವ, ನಮ್ಮ ಕೇರಿಯೊಳು ಸುಳಿದು ಪೋದನಮ್ಮ ||ಪ|| ಪಾರಿಜಾತವ ತುರುಬಿದ, ಕಸ್ತೂರಿ ಗೀರು ಗಂಧವ ತಿದ್ದಿಹನಮ್ಮ ದೂರದಲಿ ನಿಂತುಕೊಂಡು, ಸೋಗೆಕಣ್ಣು ಓರೆನೋಟದಿ ನೋಡುವನಮ್ಮ || ಶಂಖ ಚಕ್ರವ ಪಿಡಿದಿಹ ತಾನು, ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು