ದೇವತಾ ದರ್ಶನ

ಎಂಥಾ ಚೆಲುವಗೆ ಮಗಳನು ಕೊಟ್ಟನು

ಎಂಥಾ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ || ಪಲ್ಲವಿ || ಕಂತುಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮಾ || ಅನು ಪಲ್ಲವಿ || ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯ ಧರಿಸಿದ ಉರಗಭೂಷಣನ ನೋಡಮ್ಮಮ್ಮಾ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆ ರಾಜರ

ರಾಗ ಭೈರವಿ/ಅಟ್ಟ ತಾಳ ಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ || ಕಂಡೆ ಕಂಡೆನು ಕರುಣ ನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡ ಒಡೆಯಲು ದ್ದಂಡ ಮಾರುತಿಪದಕೆ ಬರುವನ || ೧ || ಪಂಚ ವೃಂದಾವನದಿ ಮೆರೆಯುವ ಪಂಚಬಾಣನ ಪಿತನ ಸ್ಮರಿಸುತ ಪಂಚನಂದನ ಮುಂದೆ ಆಗುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಿವದರುಶನ ನಮಗಾಯಿತು

ರಾಗ: ಮಧ್ಯಮಾವತಿ/ಆದಿ ತಾಳ ಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯ ಜಾಗರಣೆ || ಪಲ್ಲವಿ || ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು || ೧ || ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈತ ಮುಖ್ಯ ಪ್ರಾಣನಾಥ

ರಾಗ ಬೇಹಾಗ್/ಅಟ್ಟ ತಾಳ ಈತ ಮುಖ್ಯ ಪ್ರಾಣನಾಥ || ಪಲ್ಲವಿ || ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ || ಭಾನುವಿನ ತುಡಿಕಿದಾತ ಭಾರತಕೆ ಬಂದಾತ ವಾನರೋತ್ತಮ ಹನುಮ ಹರಿಶರಣನೀತ || ೧ || ವಾರಿಧಿಯ ನೆಗೆದಾತ ವನಚರಾಗ್ರೇಸರನೀತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ರಾಗ ಸೌರಾಷ್ಟ್ರ/ಅಟ್ಟ ತಾಳ ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ || ಏಳು ಶರಧಿಯು ಎನಗೆ ಏಳು ಕಾಲುವೆಯು ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ || ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ ಹ್ಯಾಗೆ ಬಿಟ್ಟರು ಹೇಳೊ ಕೋತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾರಿ ಬಂದನೆ ಪ್ರಾಣೇಶ ಬಂದನೆ

ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ || ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು ಧೀರನು ವಯ್ಯಾರದಿಂದ || ಅನು ಪಲ್ಲವಿ || ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿರಯ್ಯ ಹನುಮಂತನ ಮಹಿಮೆಯ

ರಾಗ ಶಂಕರಾಭರಣ/ಚಾಪು ತಾಳ ನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ || ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ || ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು