ಏನ ಹೇಳಲೆ ನಾನು ಕೃಷ್ಣನ ಮಹಿಮೆ

ಏನ ಹೇಳಲೆ ನಾನು ಕೃಷ್ಣನ ಮಹಿಮೆ

( ರಾಗ ಕಲ್ಯಾಣಿ. ಅಟ ತಾಳ) ಏನ ಹೇಳಲೆ ನಾನು ಕೃಷ್ಣನ ಮಹಿಮೆ ಯಾರಿಗೂ ತಿಳಿದನಮ್ಮ ||ಪ|| ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತಿದ್ದಳು ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಪೋದ || ಪರಿಪರಿ ಚಿಂತೆಯಿಂದ ಯಶೋದೆ ನಾರಿಯರ ಕಳುಹಿದಳು, ಸಂದು ಸಂದಿಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು ಒಂದು ಕ್ಷಣದಲಿ ಕೃಷ್ಣ ಬಂದು ಎದುರಾಗಿ ನಿಂದ || ಕಂದಯ್ಯನ ಕರ ಪಿಡಿದು ಯಶೋದೆ ಕರೆ- ತಂದಳರಮನೆಗೆ, ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು ಮುತ್ತು ಏನು ಮಾಡಿದೆಯೆಂದು ಸಿಟ್ಟಿನಿಂದ ಕೇಳಿದಳು || ಹೆತ್ತ ತಾಯ ಕರೆದುಕೊಂಡು ಹಿತ್ತಲೊಳಗೆ ಮುತ್ತಿನ ಗಿಡ ತೋರಿಸಿದ , ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು ಕಡಿದು ಕಡಿದು ರಾಶಿ ಹಾಕಿದ, ಪರಮ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು