ಕಂಡೆ ಕಂಡೆ ರಾಜರ

ಕಂಡೆ ಕಂಡೆ ರಾಜರ

ರಾಗ ಭೈರವಿ/ಅಟ್ಟ ತಾಳ ಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ || ಕಂಡೆ ಕಂಡೆನು ಕರುಣ ನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡ ಒಡೆಯಲು ದ್ದಂಡ ಮಾರುತಿಪದಕೆ ಬರುವನ || ೧ || ಪಂಚ ವೃಂದಾವನದಿ ಮೆರೆಯುವ ಪಂಚಬಾಣನ ಪಿತನ ಸ್ಮರಿಸುತ ಪಂಚನಂದನ ಮುಂದೆ ಆಗುತ ಮಿಂಚಿನಂದದಿ ಪೊಳೆವ ಮಹಿಮನ || ೨ || ಪಂಚಪಾತಕ ಕಳೆವ ದೇವನ ಪಂಕಜಾರಿನಿಭೇಂದುವಕ್ತ್ರನ ಆ ತಂಕವಿಲ್ಲದೆ ಭಜಿಪ ಸುಜನರ ಶಂಕೆ ಬಿಡಿಸುವ ಶಂಕರೇಶ || ೨ || ಭಜಿಸುವವರಿಗೆ ಭಾಗ್ಯ ಕೊಡುವನ ಋಜುಗಣೇಶಮರೇಂದ್ರ ವಂದಿತ ನಿಜಪುರಂದರವಿಠ್ಠಲೇಶನ ಭಜನೆ ಮಾಡುವ ಭಾವಿ ಮರುತನ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು