ಆಗಲೇ ಕಾಯಬೇಕೋ

( ರಾಗ ಸಾವೇರಿ. ಛಾಪು ತಾಳ) ಆಗಲೇ ಕಾಯಬೇಕೋ ಅಂಬುಜಾಕ್ಷನೆ ಎನ್ನ ||ಪ|| ಈಗ ನೀ ಕಾಯ್ದರೇನೊ , ಕಾಯದಿದ್ದರೆ ಏನೊ ||ಅ|| ಅನುಜತನುಜರುಂಟು ಬಹು ಹಣವೊಳಗುಂಟು ಚಿನ್ನ ಚೀನಾಂಬರವುಂಟು ಉಪ್ಪರಿಗೆಯುಂಟು ಮೊನ್ನೆ ಹುಟ್ಟಿದ ಗಂಡು ಮಗನೊಬ್ಬನೆನಗುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದುರಿತ ಗಜಕೆ ಪಂಚಾನನ

( ರಾಗ ಮಧ್ಯಮಾವತಿ. ಅಟ ತಾಳ) ದುರಿತ ಗಜಕೆ ಪಂಚಾನನ, ನರ- ಹರಿಯೆ ದೇವರ ದೇವ ಗಿರಿಯ ಗೋವಿಂದ ||ಪ|| ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ ಗೋವಿಂದ || ಅರಸು ಮುಟ್ಟಲು ದಾಸಿ ರಂಭೆಯು ದೇವ ಪರಶು ಮುಟ್ಟಲು ಲೋಹ ಹೊನ್ನು ಗೋವಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಕಡೆಹಾಯಿಸುವುದು

( ರಾಗ ನೀಲಾಂಬರಿ. ಆದಿ ತಾಳ) ಎನ್ನ ಕಡೆಹಾಯಿಸುವುದು ನಿನ್ನ ಭಾರ ನಿನ್ನ ನೆನೆಯುತಿಹುದೆ ಎನ್ನ ವ್ಯಾಪಾರ || ಪ|| ಎನ್ನ ಸತಿಸುತರಿಗೆ ನೀನೆ ಗತಿ ನಿನ್ನನೊಪ್ಪಿಸುವುದು ಎನ್ನ ನೀತಿ || ಎನ್ನ ಒಡಲ ಪೊರೆವುದು ನಿನ್ನ ಧರ್ಮ ನಿನ್ನ ಅಡಿಗೆರಗುವುದು ಎನ್ನ ಕರ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂಬೆನೊಬ್ಬ ಯತಿವರ

( ರಾಗ ಕಾಂಭೋಜಿ/ನೀಲಾಂಬರಿ. ಝಂಪೆ ತಾಳ) ಏನೆಂಬೆನೊಬ್ಬ ಯತಿವರ ದಿವ್ಯ ಮಾನಿನಿಯ ಮನ ಮೆಚ್ಚಿ ಪೋದನೇತಕೆ ಕೇಳೇ ಕೆಳದಿ || ಪ|| ಚೆಲುವನೆಂಬವನಿಗೆ ಬಹುಕಾಲ ಮನದಿ ವೆ- ಗ್ಗಳಿಸಿ ಮಾಡಿದ ಸೇವೆಗಳನು ಮರೆತು ತಳಿತ ಸಂತೋಷದಿಂ ತಾನವಳ ತಕ್ಕೈಸಿ ಜಲಜಾಕ್ಷ ಪೋದನೇತಕೆ ಕೇಳೇ ಕೆಳದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಬಂದ್ಯೋ ಜೀವವೇ ವ್ಯರ್ಥವಾಗಿ

( ರಾಗ ಕೇದಾರಗೌಳ. ಅಟ ತಾಳ) ಏನು ಬಂದ್ಯೋ ಜೀವವೇ ವ್ಯರ್ಥವಾಗಿ ಜ್ಞಾನದಿಂದಲಿ ತಿಳಿದು ಪರಗತಿಯನು ಕೂಡು ||ಪ|| ದಾನವ ಮಾಡಲಿಲ್ಲ ಧರ್ಮವ ಮಾಡಲಿಲ್ಲ ದೀನನುಡಿಗಳಿಲ್ಲ ದಾಕ್ಷಿಣ್ಯವಿಲ್ಲ ಜ್ಞಾನಿ ದಾಸ ಜನರಾ ಸಂಗದೊಳಿರಲಿಲ್ಲ ಮನ ನಿರ್ಮಲದಿ ಕ್ಷಣವು ಇರಲಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದೆಂದು ನಿನ್ನ ಪಾದವೆ

( ರಾಗ ಕಾಂಭೋಜ ತ್ರಿಪುಟ ತಾಳ) ಎಂದೆಂದು ನಿನ್ನ ಪಾದವೆ ಗತಿಯೆನಗೆ ಗೋ- ವಿಂದ ಬಾರಯ್ಯ ಎನ್ನ ಹೃದಯಮಂದಿರಕೆ ||ಪ|| ಮೊದಲಿಂದ ಬರಬಾರದೆ ನಾ ಬಂದೆ ಇದರಿಂದ ಗೆದ್ದು ಪೋಗುವುದು ಕಾಣೆ ಮುಂದೆ ತುದಿ ಮೊದಲಿಲ್ಲದೆ ಪರರಿಂದ ನೊಂದೆ ಪದುಮನಾಭನೆ ತಪ್ಪು ಕ್ಷಮೆ ಮಾಡೊ ತಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಪ್ಪಿಕೊಂಬೆ ರಂಗಯ್ಯನ

( ರಾಗ ಭೈರವಿ. ಚಾಪು ತಾಳ) ಎಂದಪ್ಪಿಕೊಂಬೆ ರಂಗಯ್ಯನ, ಎಂದಪ್ಪಿಕೊಂಬೆ ||ಪ|| ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ ಎಂದಿಗೆ ಸವಿ ಮಾತನಾಡಿ ನಾ ತಣಿವೆ ||ಅ|| ಅಂದುಗೆ ಪಾಡಗ ಗೆಜ್ಜೆ ಘಲು ಘಲುರೆಂದು ಚೆಂದಾಗಿ ಕುಣಿವ ಮುಕುಂದನ ಚರಣವ || ಹೊನ್ನುಂಗುರುಡಿದಾರ ಹೊಳೆವ ಪೀತಾಂಬರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನಗೂ ಆಣೆ ರಂಗ ನಿನಗೂ ಆಣೆ

( ರಾಗ ಶಂಕರಾಭರಣ. ತ್ರಿಪುಟ ತಾಳ) ಎನಗೂ ಆಣೆ ರಂಗ ನಿನಗೂ ಆಣೆ ||ಪ|| ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ||ಅ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ || ತನು ಮನ ಧನದಲಿ ವಂಚಕನಾದರೆ ಎನಗೆ ಆಣೆ ರಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ

( ರಾಗ ಕಲ್ಯಾಣಿ. ಅಟ ತಾಳ) ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ|| ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು ಬರೆದೋದಲವನ ಪಿತ ಕೋಪದಿಂದ ಸ್ಥಿರವಾದಡಿ ಕಂಭದೊಳು ತೋರು ತೋರೆನಲು ಭರದಿ ಬರಲದಗೆ ವೈಕುಂಠ ನೆರೆ ಮನೆಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೃಷ್ಟಿ ತಾಗಿತೆ

( ರಾಗ ಧನಶ್ರೀ ಆದಿ ತಾಳ) ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ ||ಪ|| ಸೃಷ್ಟಿಯಲಿ ನಾರಿಯರು ಕಣ್ಣಿಟ್ಟು ಹೀರುವರು ಕಾಣೆ ||ಅ|| ಬಿಟ್ಟ ಕಣ್ಣ ಮುಚ್ಚಲಿಲ್ಲ ಮುಟ್ಟಗೊಡ ಬೆನ್ನಮುಳ್ಳ ಇಷ್ಟು ಗಂಟಲೊಳು ಗುರು- ಗುಟ್ಟಿ ಗುಟ್ಟಿತೇ ನಮ್ಮ || ತೆರೆದ ಬಾಯ ಮುಚ್ಚಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು