ಏನು ಮ್ಯಾ ರಾವಣ
( ರಾಗ ಮುಖಾರಿ. ಆದಿ ತಾಳ)
ಏನು ಮ್ಯಾ ರಾವಣ
ನೀನು ಮ್ಯಾ ಸೀತೆಯ ತಂದಿದ್ಯಾ ||ಪ||
ನಿನ್ನ ಬಳಿಗೆ ರಾಮ ಎನ್ನ ಕಳುಹಿಕೊಟ್ಟ
ಇನ್ನಾದರು ಸೀತೆಯ ಬಿಡುವಿಯೇನು ಮ್ಯಾ ||ಅ||
ಕಾಣದೆ ಹೀಗೆ ಕದ್ದು ತರಬಹುದೆ
ನನ್ನಿಂದ ತಪ್ಪೆಂದು ಹೊನ್ನ
ಕಾಣಿಕೆಯಿತ್ತು ಬೆನ್ನ ಮರೆಯಾಗಿ
ನೀ ಹೋಗಬಾರದೇನು ಮ್ಯಾ ||
ಶೂರ್ಪಣಖಿಯ ಹುಚ್ಚು ಹುಚ್ಚು ಮಾತು ಕೇಳಿ
ಖರದೂಷಣರೇನಾದರು ಹೇಳು ಮ್ಯಾ ||
ತಾತ ಕೌಸಲ್ಯ ರಘುನಾಥ ಹೇಳುವನಲ್ಲ
ಈತನ ಶೌರ್ಯ ಮುಂದೆ ತಿಳಿದೀತು ಮ್ಯಾ ||
ಮಂಡೋದರಿ ಬಹಳ ಮಕ್ಕಳ ಪಡೆದಿದ್ದಾಳೆ
ಕಂಡವರ ಬಾಯಿತುತ್ತು ಮಾಡಬೇಡ ಕಾಣೊ ಮ್ಯಾ ||
ಅವ ತಾ ಮನುಜನಲ್ಲ ಪುರಂದರವಿಠಲ
ಶಿರವ ಹೊಯ್ದು ಒಯ್ಯುವನು ತಿಳಿ ಮ್ಯಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments