ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ
( ರಾಗ ಕಾಂಭೋಜ. ಝಂಪೆ ತಾಳ)
ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ ||ಪ||
ಹೀನಕುಲಗೊಲ್ಲ ಶ್ರೀ ಗೋಪಾಲಕೃಷ್ಣನಿಗೆ ||ಅ||
ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ
ಹೇಸಿಕಿಲ್ಲದೆ ಕರಡಿಯ ಕೂಡಿದ
ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ
ದೋಷಕಂಜದೆ ಮಾವನ ಶಿರ ತರಿದವಗೆ ||
ಕುಂಡಗೋಳಕರ ಮನೆ ಕುಲದೈವನೆನಿಸಿದಗೆ
ಮಂಡೆಬೋಳರ ಮನಕೆ ಮನೆದೈವವ
ಹಿಂಡು ಗೊಲ್ಲರ ಮನೆಯ ಹಿರಿಯೆನೆಂದೆನಿಸುವ
ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ ||
ಒಬ್ಬರಲಿ ಹುಟ್ಟಿ ಒಬ್ಬರಲಿ ಬೆಳೆದ
ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ
ಅಬ್ಬರದ ದೈವ ಶ್ರೀ ಪುರಂದರವಿಠಲನ
ಉಬ್ಬುಬ್ಬಿ ಮದುವ್ಯಾದೆ ಉತ್ಸಾಹದಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments