ಏತರ ಕಟಪಟಿ

ಏತರ ಕಟಪಟಿ

( ರಾಗ ಕಾಪಿ. ಆದಿ ತಾಳ) ಏತರ ಕಟಪಟಿ ಒಂದಿನ ಹೋಗುತಿದ್ದೆ ಲಟಪಟಿ || ಬರೋವಾಗ್ಗೆ ಏನು ತಂದೆ ಬರುತಲೆ ಎಲ್ಲಾನು ನನ್ನದೆಂದೆ ದುಡ್ಡು ಕೂಡಿಟ್ಟು ಬಳಿದು ಹೋಗುವಾಗ ಬಳಲಿ ಬಳಲಿ ಅಳುಮಾರಿಗೆ ಬಂದೆ || ದೊಡ್ಡ ಮನೆಯ ಕಟ್ಟಿ ಅದರೊಳು ಮಡದಿಯ ಒಯ್ದಿಟ್ಟೆ ಮಡದಿಗೆ ಮೋಹದ ಮಗು ಒಂದು ಹುಟ್ಟಿ ಅದರ ಮೇಲೆ ನೀ ಮನಸಿಟ್ಟೆ || ಸಂಸಾರ ಬಲು ಖೊಟ್ಟಿ ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ ತಂದೆ ಪುರಂದರವಿಠಲರಾಯನ ಧ್ಯಾನವನ್ನೆ ಮರೆತು ಬಿಟ್ಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು