ಎತ್ತ ಪೋದನಮ್ಮ ವಿಪ್ರನ

ಎತ್ತ ಪೋದನಮ್ಮ ವಿಪ್ರನ

( ರಾಗ ಸುರುಟಿ. ಆದಿ ತಾಳ) ಎತ್ತ ಪೋದನಮ್ಮ, ವಿಪ್ರನ ಎಲ್ಲಿ ಹುಡುಕಲಮ್ಮ ||ಪ|| ಮುತ್ತಿನ ಮೂಗುತಿ ಮುಕ್ತಿಲಿ ಬ್ರಾಹ್ಮಣ ಇಕ್ಕೊ ಈಗಲೆಂದು ಮಾಯವಾದನು ||ಅ|| ಪಂಢರಪುರವಂತೆ, ಅಲ್ಲಿ ಪಾಂಡುರಂಗನಂತೆ ತಂಡತಂಡದಿ ಹರಿ ಕೀರ್ತನೆ ಮಾಡುತ ಕಂದನ ಲಗ್ನಕೆ ಪೋಗಬೇಕೆನುತ || ಅಂದಿನ ದಿನದಲ್ಲಿ, ನಾರಿಯ ಕಂಭಕ್ಕೆ ಕಟ್ಟಿರಲು ಮಂದರೋದ್ಧರನ ಮೊರೆಯಿಟ್ಟು ಕೂಗಲು ಬಂಧನ ಬಿಡಿಸಿ ಮುಕುತಿಯ ಕೊಟ್ಟನು || ಪತ್ನಿಪತಿಯರ ಕೂಡಿ, ಬಹಳ ಅನ್ನದಾನ ಮಾಡಿ ಕನಕಾಭರಣವನೀಯನು ಪತಿವ್ರತೆ ಪುರಂದರವಿಠಲನ ಪಾದ ಸೇರಿದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು