ಮರೆಯದಲೆ ಮನದಲ್ಲಿ

ಮರೆಯದಲೆ ಮನದಲ್ಲಿ

(ರಾಗ ಕಾಂಭೋಜ ಝಂಪೆ ತಾಳ ) ಮರೆಯದಲೆ ಮನದಲ್ಲಿ ಸಿರಿವರನ ಚರಣವನು ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ|| ಮುರಹರಗೆ ಎರಗುವಾ ಶಿರ ದ್ವಾರಕಾಪುರವು ಹರಿಕಥೆಯ ಕೇಳುವಾ ಕರ್ಣ ಗೋಕರ್ಣ ಬಿರುದು ಪೊಗಳುವ ಜಿಹ್ವೆ ಸುರರ ಕ್ಷೀರಾರ್ಣವವು ಸಿರಿವರನ ಪೂಜಿಪ ಕರವು ರಾಮೇಶ್ವರವು || ಸೃಷ್ಟೀಶ ನಿರ್ಮಾಲ್ಯ ಘ್ರಾಣಿಪ ನಾಸಿಕ ಕಾಶಿ ವಿಷ್ಣುವನು ನೋಡುವ ದೃಷ್ಟಿ ಶ್ರೀಮುಷ್ಟ ಅಷ್ಟಮದ ಜರಿದ ಕಾಯಯೋಧ್ಯಾ ಮಥುರಾಪುರ ಶ್ರೀ- ಕೃಷ್ಣನ ಪಾಡುವ ಕಂಠವೇ ಶ್ರೀ ವೈಕುಂಠ || ಧರೆಯೊಳಗೆ ಶ್ರೀ ಪುರಂದರವಿಠಲರೇಯನೆ ಪರಮ ಭಾಗವತರ ಉದರ ಬದರಿ ಪರಕೆ ನಡೆಸುವ ಜಂಘೆ ಹರಿವ ಗಂಗೋತ್ತುಂಗೆ ಪರಿಯಲೊಪ್ಪುವ ಅಂಗ ಮೇಲು ಶ್ರೀರಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು