ಮನ್ಮಥಜನಕನ ಮರೆತ ಮನುಜರು

ಮನ್ಮಥಜನಕನ ಮರೆತ ಮನುಜರು

(ರಾಗ ಧನಶ್ರೀ ಆದಿ ತಾಳ ) ಮನ್ಮಥಜನಕನ ಮರೆತ ಮನುಜರು ಮರ ಮರ ಮರ ಮರಾ ಮರಾ ಚಿನ್ಮಯರೂಪನ ಚಿಂತಿಸದವನು ಛಿ ಛಿ ಛಿ ಛಿ ಛೀ ಮನುಜ ||ಪ|| ಸುರರಿಂ ವಂದ್ಯನ ಸುತ್ತದ ಕಾಲು ಸೂಳೆಮನೆಮಂಚದ ಕಾಲು ಉರಗಶಯನನ ನುಡಿಯದ ನಾಲಿಗೆ ಉಡುವಿನ ನಾಲಿಗೆಯು || ನಾರಾಯಣನ ಕಥೆ ಕೇಳದ ಕಿವಿ ಸೋರುವ ಮಾಳಿಗೆ ನಾಳಗಳು ಸರಸಿಜ ನಾಭನ ಎತ್ತದ ಹೆಗಲು ಸತ್ತ ಕುರಿಯ ಹೆಗಲು || ಹರಿನೈವೇದ್ಯ ಉಣ್ಣದ ಬಾಯಿ ಹರಿದಾಡುವ ಹಾವಿನ ಹೋರು ನರಹರಿರೂಪನ ನೋಡದ ಕಣ್ಣು ನವಿಲುಗರಿಯ ಕಣ್ಣು || ಕರಿವರದನ ಪೂಜಿಸದ ಕರಗಳು ದಾರಿಯ ತೋರುವ ಮರದ ಕೈಗಳು ಗರುಡಗಮನನ ನಮಿಸದ ಶಿರವು ಉರಗನ ವಿಷತಲೆಯು || ಮಂಗಳಮೂರ್ತಿಯ ಪಾಡದ ಕಂಠ ಒಡೆದು ಹೋದ ಹರವಿನ ಕಂಠ ರಂಗಪುರಂದರವಿಠಲನ ಮರೆತವ ರಜಕನ ಮನೆ ಕತ್ತೆಯೆ ನಿಜವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು