ಮುದ್ದು ಕೊಡೊ ಬಾರೊ

ಮುದ್ದು ಕೊಡೊ ಬಾರೊ

(ರಾಗ ಮೋಹನ. ಛಾಪು ತಾಳ ) ಮುದ್ದು ಕೊಡೊ ಬಾರೊ ತಂದೆ ರಂಗಯ್ಯ, ನಿನ್ನ ಸುದ್ದಿ ಕೇಳಿದರೆ ಸಾಕೋ ಕೃಷ್ಣಯ್ಯ ||ಪ|| ಎಲ್ಲಿ ಹುಟ್ಟಿದರೇನೊ ರಂಗಯ್ಯ, ನೀನು ಗೊಲ್ಲನಲ್ಲನೆಂಬೊ ಸಿರಿ ಕೃಷ್ಣಯ್ಯ || ರಾಯರ ಮನೆಯಲ್ಲಿ ರಂಗಯ್ಯ, ನಿನ್ನ ಮಾಯ ಮರ್ಮವನು ಕಾಣೆ ಕೃಷ್ಣಯ್ಯ || ಅಣ್ಣ ನೀನು ಕೂಡಿ ಆಡೊ ರಂಗಯ್ಯ, ನೀನು ಬುದ್ಧಿವಂತನಾಗಿ ಇರೊ ಕೃಷ್ಣಯ್ಯ || ಚೋರನಾಗದಿರೋ ರಂಗಯ್ಯ, ನೀನು ಅಂದ ತೋರಬೇಡ ಸಿರಿ ಕೃಷ್ಣಯ್ಯ ಮಾನ ತೆರ ಹೋಗ ಬೇಡ ರಂಗಯ್ಯ, ಅವರ ಬೂತಮಾಡಬೇಡ ಕೃಷ್ಣಯ್ಯ || ತಾಯಿ ನೀನು ತಂದೆನೆಂದೆ ರಂಗಯ್ಯ, ಅವರ ಬಾಯ್ಗೆ ಅಂಜುತಿ ಸಿರಿ ಕೃಷ್ಣಯ್ಯ || ಸೃಷ್ಟಿಕರ್ತ ಬಾರೊ ತಂದೆ ರಂಗಯ್ಯ, ನೀನು ಪುರಂದರ ವಿಠಲಾದ ಕೃಷ್ಣಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು