ನಡೆದು ಬಾ ನಾಲ್ವರಿದ್ದೆಡೆಗೆ

(ರಾಗ ನಾಟಕುರಂಜಿ ಮಟ್ಟೆ ತಾಳ ) ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ ನಮ್ಮ ನಿಮ್ಮ ತೊಡಕ ನಿರ್ಣಯಿಸಿಕೊಂಬೆನು ತೋಯಜಾಕ್ಷ ||ಪ|| ಆದಿಯಲ್ಲಿ ಎನ್ನ ಮತ್ತಾರು ನಿನ್ನ ಪಾದಸೇವೆಯ ಮಾಡಿ ಹಲವು ಕಾಲ ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆ ಆಧಾರವಾದುದನೇಕೆ ಕೊಡಲೊಲ್ಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಸುರೆ ತೊಳೆಯಬೇಕು

(ರಾಗ ಧನಶ್ರೀ ಮಟ್ಟೆ ತಾಳ ) ಮುಸುರೆ ತೊಳೆಯಬೇಕು, ಈ ಮನಸಿನ ಮುಸುರೆ ತೊಳೆಯಬೇಕು |||ಪ|| ಮುಸುರೆ ತೊಳೆಯಬೇಕು , ಗುಸುಗುಸು ಬಿಡಬೇಕು ಈಶಪ್ರೇರಣೆಯೆಂಬೊ , ಹಸಿಯ ಹುಲ್ಲನು ಹಾಕಿ || ಅಷ್ಟಮದದಿಂದ ಸುಟ್ಟ ಈ ಪಾತ್ರೆಯ ವಿಷ್ಣು ನಾಮವೆಂಬೊ ಕೃಷ್ಣಾ ನದಿಯಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಂಜಾನೆಯೆದ್ದು ಗೋವಿಂದ ಎನ್ನಿ

(ರಾಗ ಆನಂದಭೈರವಿ ಅಟತಾಳ ) ಮುಂಜಾನೆಯೆದ್ದು ಗೋವಿಂದ ಎನ್ನಿ ||ಪ|| ನಮ್ಮನಂಜಿಪ ದುರಿತವು ದೂರವೆನ್ನಿ ||ಅ|| ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ ಶಿಶುವು ಮೊರೆಯಿಡಲು ರಕ್ಷಿಸಿದನೆನ್ನಿ ಅಸುರನರಣ್ಯದೊಳ್ ಭಸ್ಮವ ಮಾಡಲು ವಸುಧೆಯೊಳ್ ನಾಟ್ಯವನಾಡಿದನೆನ್ನಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವ ನಿಲಿಸುವದು ಬಹು ಕಷ್ಟ

(ರಾಗ ನಾದನಾಮಕ್ರಿಯ ಆದಿ ತಾಳ ) ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ ಮನವ ನಿಲಿಸುವದು ಬಹು ಕಷ್ಟ ||ಪ|| ಕಾಶಿಗ್ಹೋಗಲುಬಹುದು ದೇಶ ತಿರುಗಲುಬಹುದು ಆಸೆ ಸುಟ್ಟಂತೆ ಇರಬಹುದು ||೧|| ಜಪವ ಮಾಡಲುಬಹುದು ತಪವ ಮಾಡಲುಬಹುದು ಉಪವಾಸ ವ್ರತದಲ್ಲಿರಬಹುದು ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ

( ರಾಗ ಸೌರಾಷ್ಟ್ರ ಅಟತಾಳ) ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ ||ಪ|| ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ ||ಅ|| ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ ಚಿತ್ತಪಲ್ಲಟವಾಗಿ ತಿರುಗುವ ಸತಿಯನ ಸಂಗವೇಕೆ ಉತ್ತಮ ಗುರುವನು ನಿಂದನೆ ಮಾಡುವ ಶಿಷ್ಯನೇಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಸಿವೆಯಾಗುತಿದೆ ಅಮ್ಮ ಕೇಳೆ

( ರಾಗ ಕಾಪಿ ಏಕತಾಳ) ಹಸಿವೆಯಾಗುತಿದೆ ಅಮ್ಮ ಕೇಳೆ ಹಸನಾದ ಅವಲಕ್ಕಿ ಬೆಲ್ಲ ಕಲಸಿ ಕೊಡೆ ||ಪ|| ಬಿಸಿ ಬಿಸಿ ಅನ್ನ ಕೈ ಸುಡುತಿದೆ ಬದಿಯಲ್ಲಿ ಕೂಡೆ ||ಅ|| ಖಾರ ಸಾರು ಮಾಡಬೇಡ ಉಣ್ಣಬಾರೆನೆ, ಎನಗೆ ಸೀಸಾರು ಮಾಡಿದರೆ ಬೇಗನುಂಬುವೆ || ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ, ಎನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ

( ರಾಗ ಬಿಲಹರಿ ತ್ರಿಪುಟ ತಾಳ) ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ ದುರಿತ ಪರ್ವತಗಳ ಖಂಡಿಪುದು ವಜ್ರದಂತೆ ||ಪ|| ಮೇರುಸುವರ್ಣ ದಾನವ ಮಾಡಲು ನಿತ್ಯ ನೂರು ಕನ್ಯಾದಾನವ ಮಾಡಲು ಧಾರಿಣಿಯೆಲ್ಲವ ಧಾರೆಯನೆರೆಯಲು ನಾರಾಯಣ ಸ್ಮರಣೆಗೆ ಸರಿಯಹುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ರಾಮ ಎಂಬೆರಡಕ್ಷರ

ರಾಗ - ಧನ್ಯಾಸಿ ತಾಳ - ಆದಿ ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ|| ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ| ಕುಂಜರ ರವಿಸುತ ಬಲ್ಲವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಹರಿಯೇ ಪರದೈವ

( ರಾಗ ಶಂಕರಾಭರಣ ಅಟತಾಳ) ಹರಿಯೇ ಪರದೈವ ||ಪ|| ಹರವಿರಿಂಚಾದಿಗಳು ಅವನ ಸೇವಕರಯ್ಯ ||ಅ|| ಒಬ್ಬನು ನಮ್ಮ ಹರಿ ಒಬ್ಬೊಬ್ಬರಲ್ಲಿರುವ ಒಬ್ಬರ ವಶವಲ್ಲ ಸರ್ವ ಸ್ವತಂತ್ರ ಒಬ್ಬರ ನುಡಿಗಳಿಗೆ ಉಬ್ಬಿ ನಡೆದಾಡುವ ಒಬ್ಬೊಬ್ಬರಿಗೆ ಬಲು ದೂರನಾಗುವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೇ ಕುಣಿಯೆಂದು ಕುಣಿಸಿದರಯ್ಯ

( ರಾಗ ಮೋಹನ ಅಟತಾಳ) ಹರಿಯೇ ಕುಣಿಯೆಂದು ಕುಣಿಸಿದರಯ್ಯ ಹರಿಯೇ ಕುಣಿಯೆನುತ ||ಪ|| ನಡೆಯಡಿಯಿಲ್ಲದೆ ನಡೆವನ ಕುಡಿವನ ಪಡತಿಂಬನ ಒಡಹುಟ್ಟಿದನ ಒಡೆಯನ ಕಂದನ ವೈರಿಯ ಭಂಡಿಯ ಹೊಡೆದ ಮಹಾತ್ಮನ ಕುಣಿಸಿದರಯ್ಯ || ಒಣಗಿದ ಮರದಲಿ ಇಲ್ಲದ ಬಳ್ಳಿ ಬಣತಿಗೆ ಹುಟ್ಟಿದವನ ತಳ್ಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು