ಲಕ್ಷ್ಮೀಕಾಂತ ಬಾರೋ

ಲಕ್ಷ್ಮೀಕಾಂತ ಬಾರೋ

(ರಾಗ ಶಂಕರಾಭರಣ ಆದಿ ತಾಳ ) ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ ಪಕ್ಷಿವಾಹನವೇರಿದನೆ ಪಾವನಮೂರ್ತಿ ಬಾರೋ ||ಪ || ಆದಿಮೂಲ ವಿಗ್ರಹವಿನೋದಿ ನೀನೆ ಬಾರೋ ಸಾಧುಸಜ್ಜನ ಸತ್ಯಯೋಗಿ(/ಸತ್ಯಯೋನಿ?) ದಾನಿ ನೀನೆ ಬಾರೋ || ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ ರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ || ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೋ ಪನ್ನಗಶಯನ ಪುರಂದರವಿಠಲ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು