ಲಂಗೋಟಿ ಬಲುವೊಳ್ಳೆದಣ್ಣ

(ರಾಗ ನಾದನಾಮಕ್ರಿಯ ಅಟತಾಳ ) ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್- ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ|| ಬಡವರಿಗಾಧಾರವಣ್ಣ, ಈ ಲಂಗೋಟಿ ಬೈರಾಗಿಗಳ ಭಾಗ್ಯವಣ್ಣ ಕಡುಕಳ್ಳರಿಗೆ ಗಂಡ, ಮಡಿಧೋತ್ರಗಳ ಮಿಂಡ ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಾಲಿಸಿದಳು ಮಗನ, ಯಶೋದೆ

(ರಾಗ ಆರಭಿ ಆದಿ ತಾಳ ) ಲಾಲಿಸಿದಳು ಮಗನ, ಯಶೋದೆ ಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ || ಬಾಲಕನೆ ಕೆನೆ ಹಾಲು ಮೊಸರನೀವೆ ಲೀಲೆಯಿಂದಲಿ ಎನ್ನ ತೋಳ ಮೇಲ್ ಮಲಗೆಂದು || ಮುಗುಳುನಗೆಯಿಂದ ಮುದ್ದು ತಾ ತಾರೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಡೆ ಬೋಳಾದ ಸನ್ಯಾಸಿಯು

(ರಾಗ ಸೌರಾಷ್ಟ್ರ ಆದಿ ತಾಳ ) ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ ||ಪ|| ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ ||ಅ|| ಮಡಿಯ ಮಾಡಿ ಮೈತೊಳೆದು ನಾವುಣ್ಣಲಾರೆವಮ್ಮ ನಡತೆ ತಪ್ಪಿತೆಂದೊಬ್ಬರು ನಮ್ಮನು ದಂಡಿಸಿದ್ದಿಲ್ಲವಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂದಮತಿಯೋ ನಾನು ಮದನಜನಕನು ನೀನು

(ರಾಗ ಕಾಂಭೋಜ ಝಂಪೆ ತಾಳ ) ಮಂದಮತಿಯೋ ನಾನು ಮದನಜನಕನು ನೀನು ಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ|| ಪಾಪಕರ್ತನು ನಾನು ಪಾಪನಾಶನು ನೀನು ಕೋಪ ಮದ ಮತ್ಸರದಿ ಸುಳಿವೆ ನಾನು ತಾಪವನು ತರಿದು ನಿರ್ಭಯವ ಮಾಡುವೆ ನೀನು ರೂಪ ಛಾಯಕೆ ಮರುಳುಗೊಂಬೆನೋ ನಾನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟ ಬಾರೋ ಎನ್ನನು

(ರಾಗ ಕಾನಡಾ ಆಟ(ಆದಿ) ತಾಳ ) ಮುಟ್ಟ ಬಾರೋ ಎನ್ನನು, ಹೇ ಮುದ್ದು ರಂಗ ||ಪ|| ಮುಟ್ಟ ಬಾರೋ ಎನ್ನ, ಪುಟ್ಟ ಪಾದವನೊತ್ತಿ ಮೆಟ್ಟಿ ಇಲ್ಲಿಗೆ ಈಗ ಮೆಲ್ಲ ಮೆಲ್ಲನೆ ಬಾರೋ ||ಅ|| ಅಪ್ಪಚ್ಚಿ ತರುವೆನಯ್ಯ ಬೇಕಾದಷ್ಟು ಅಪ್ಪವು ಹಾಲು ಮತ್ತು ಬೆಣ್ಣೆಯ ಕೊಡುವೆನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಪ್ಪಿನ ಗಂಡನ ಒಲ್ಲೆನು

(ರಾಗ ಆನಂದಭೈರವಿ ಅಟತಾಳ ) ಮುಪ್ಪಿನ ಗಂಡನ ಒಲ್ಲೆನು ನಾನು ||ಪ|| ತಪ್ಪದೆ ಪಡಿಪಾಟ ಪಡಲಾರೆನಕ್ಕ ||ಅ|| ಉದಯದಲ್ಲೇಳಬೇಕು ಉದಕ ಕಾಸಲುಬೇಕು ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆಂಡತಿ ಪ್ರಾಣ ಹಿಂಡುತಿ

( ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ) ಹೆಂಡತಿ, ಪ್ರಾಣ ಹಿಂಡುತಿ ||ಪ|| ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ|| ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ ಉತ್ತಮ ಗುರುಹಿರಿಯರ ಮಾತು ಮೀರುತ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು

೪-೬೭ ( ರಾಗ ಶಂಕರಾಭರಣ ಏಕ ತಾಳ) ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ ಬಣ್ಣಿಸಿ ಕಸ್ತೂರಿ ತಿಲಕವನಿಟ್ಟು ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಯ್ಯೋ ಹೊಯ್ಯೋ ಹೊಯ್ಯೋ

( ರಾಗ ಆನಂದಭೈರವಿ ಛಾಪುತಾಳ) ಹೊಯ್ಯೋ ಹೊಯ್ಯೋ ಹೊಯ್ಯೋ ಹೊಯ್ಯೋ ಡಂಗುರವ ಅಯ್ಯ ಕೃಷ್ಣಯ್ಯನು ಪರನೆಂದು ||ಪ|| ಭಯವ ಬಿಡಿಸಿ ಸುರರ ಕಾದವರಾರಯ್ಯ ಜಯನಾಮಕ ತಂದೆ ಪುರಂದರವಿಠಲನಲ್ಲದೆ ||ಅ|| ಹರಿಗೆ ಹಾಸಿಗೆ ಆಗಬೇಕು ಎಂದೆನುತಲಿ ಹರನು ಏಸುಕಾಲ ತಪಗೆಯ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊರಗ್ಹೋಗಿ ಆಡದಿರ್ ‍ಹರಿಯೆ

( ರಾಗ ಆನಂದಭೈರವಿ ಛಾಪು ತಾಳ) ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ, ನೆರೆ- ಹೊರೆಯವರು ಕಂಡರೆ ದೂರುವುದರಿಯೆ ||ಪ|| ಮನೆಯೊಳಗಾಡೋದೆ ಚಂದ, ನೆರೆ ಮನೆಗಳಿಗೆಲ್ಲ ಪೋಗುವರೆ ಮುಕುಂದ ಮಾನಿನಿಯರು ಮೋಹದಿಂದ ನಿನ್ನ ಮನವನಪಹರಿಸಿಕೊಂಬುವರೊ ಗೋವಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು