ಲಗ್ಗೆಯೋ ವೈಕುಂಥ ಲಗ್ಗೆಯೋ
(ರಾಗ ಕಲ್ಯಾಣಿ ಅಟತಾಳ)
ಲಗ್ಗೆಯೋ ವೈಕುಂಥ ಲಗ್ಗೆಯೋ ||ಪ ||
ಒಗ್ಗಿಲಿ ಶ್ರೀಹರಿಯನಾಡೊ ಸುಜನರ್ಗೆ ||ಅ ||
ಸಂಸಾರವೆಂಬೋದು ಸದರವಲ್ಲವೆಂದು
ಸಂಶಯವೆಂಬೋದು ಇನಿತಿಲ್ಲದೆ
ಹಂಸನ ತನ್ನ ಮನೆಯೊಳು ನೇಮಿಸಿ
ಕಂಸಾರಿಯೆಡೆಯೊಳು ಕಡುಸ್ನೇಹ ಮಾಳ್ವಗೆ ||
ಮಾಯಾಪಾಶವ ಕಳೆದು ಮದಮತ್ಸರವಳಿದು
ಕಾಯವು ಸ್ಥಿರವಲ್ಲವೆಂದು ತಿಳಿದು
ನ್ಯಾಯ ಮೀರದೆ ಅನ್ಯಾಯಕ್ಕೆ ಸೇರದೆ
ಕಾಯಜಪಿತನೊಳು ಕಡುಸ್ನೇಹ ಮಾಳ್ವಗೆ ||
ಭ್ರೂ ಮಧ್ಯದೆಡೆಯೊಳು ನಾಸಿಕಾಗ್ರದೊಳು
ನೇಮದಿಂದ ದೃಷ್ಟಿಯ ನಿಲ್ಲಿಸಿ
ಪ್ರೇಮದಿ ಪುರಂದರವಿಠಲನ ಭಜಿಸುತ
ಭೂಮಿಯೊಳಿಹ ಬುದ್ಧಿವಂತ ಮನುಜರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments