ಮಾಧವ ಮದುಸೂಧನ

ಮಾಧವ ಮದುಸೂಧನ

(ರಾಗ ಸಾವೇರಿ ಅಟತಾಳ ) ಮಾಧವ ಮಧುಸೂಧನ ಯಾದವಕುಲರನ್ನ ಬಾರೆಂದು ಕರೆದಳೆಶೋದೆ ಮುದ್ದಿಸಿ ಮಗನ ||ಪ || ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ ಮುಂಗಯ್ಯ ವಾಕು ಬೆರಳ್ಹೊನ್ನುಂಗುರ ಝಂಗಿಪ ಉಡಿಗೆಜ್ಜೆ ಉಡಿದಾರವ ಕಂಡು ಅಂಗನೆಯರು ನಿನ್ನನೊಯ್ವರೊ ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು ಡಿಂಗರಿಗರು ಕಂಡರೆ ಬಿಡರೊ ನಿನ್ನಂಘರಿ ಮೇಲೆನ್ನ ನೊಸಲನಿಡುವೆ ಕೃಷ್ಣ ಕಂಗಳ ಸಿರಿಯೆ ಬಾರೊ ಮಗನೆ || ಬಾಲಕರೊಡನಾಟ ಸಾಕು ಬಾರಯ್ಯ ನೀಲಾಂಗ ನಿನ್ನ ಮುತ್ತಿನರಳೆಲೆ ಕೀಲು ಮಾಗಾಯಿ ಹುಲಿಯುಗುರು ಕಂಡು ಸೋಲ್ವರೊ ನಿನಗೆ ಸೊಬಗಿಯರು ಶ್ರೀಲೋಲ ನೀನಾಳಿ ಕಂಸಾಸುರನ ತುಂಬಿದೊ- ಡ್ಡೋಲಗದೊಳು ರಕ್ಕಸರು ಪಂಥವಾಡಿ ವೀಳ್ಯವ ಪಿಡಿದು ಕೊಲುವೆನೆಂದು ನಿನ್ನ ಕಾಲಿಗೆ ಎರಗುವೆ ಬಾರೋ ಮಗನೆ || ಬೊಮ್ಮದ ಮರಿಯೆ ವಿಶ್ವನೆಲ್ಲ ಹೃದಯದೊ- ಳೊಮ್ಮೆ ತೋರುವೆನೆಂದು ಕಂಡು ನಾ ಬಲ್ಲೆ ಎನ್ನ ಮನಕೆ ಆಹ್ಲಾದನು ಉಪಾಯ- ದಿಂದ ಭಾಗವತರ ಪಾಲಿಸುತಿಪ್ಪ ಅಗಮ್ಯಗೋಚರ ಶ್ರೀ ಪುರಂದರವಿಠಲ ತೊರೆ- (ದೊರೆ?) ದುಮ್ಮಿಯ ಕೊಡುವೆ ಬಾರೆಲೊ ಮಗನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು