ಮಧ್ವ ಮುನಿಯೇ ನಮ್ಮ ಗುರು
(ರಾಗ ಕಾಮವರ್ಧಿನಿ/ಪಂತುವರಾಳಿ ಆದಿ ತಾಳ )
ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ ||
ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ ||
ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ-
ವಿಂದವ ಸೇವಿಸುತ ಆನಂದದಿಂದ ಶೋಭಿಸಿದ ||
ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ-
ಮಾಣಿಕ್ಯವಾಗಿ ಹರಿಗೆ ಪ್ರಾಣನೆಂದೆನಿಸಿದ ||
ಕಟ್ಟಕಡೆಯಲಿ ಯೋಗಿ ದಿಟ್ಟನಾಗಿ ಪುರಂದರ
ವಿಟ್ಠಲ ವೇದವ್ಯಾಸರ ಪೆಟ್ಟಿಗೆ ಮುಂದೊಪ್ಪುತಿಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments