ವೆಂಕಟೇಶ ನಿನ್ನ ನಾಮಕ್ಕೆ

( ರಾಗ ಸಿಂಧುಭೈರವಿ ಆದಿ ತಾಳ) ವೆಂಕಟೇಶ ನಿನ್ನ ನಾಮಕ್ಕೆ, ಮೊದಲು ನಾಕಕ್ಷರಗಳು ನೋಡೈ ||ಪ || ಬಿಂಕವಾದ ನಾಲ್ಕು ವೇದ ಶಾಸ್ತ್ರ ಪುರಾಣಗಳಿದರಿಂದೈ ||ಅ|| ವೇದವೊಯ್ದನ ಸಾಗಿಸಿ ಗೆದ್ದೆ ಮೊದಲು ನೀನಲ್ಲವೆ ವೇಷವ ತಾಳಿದೆ ಶರಧಿಯ ಮಥನ ಲೇಸು ನಿನಗಲ್ಲವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೆಂಕಟೇಶ ಬೇಡಿಕೊಂಬೆ

( ರಾಗ ಆರಭಿ ರೂಪಕ ತಾಳ) ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ|| ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ|| ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟಭಕ್ತ ಜನರೊಳು ಎನ್ನ ಸೇರಿಸೊ ಈ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲಿದೆ ಯಾತಕಮ್ಮಾ ಲಕುಮಿ?

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ? ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಒಲಿದೆ ಯಾತಕಮ್ಮಾ ಲಕುಮಿ?|| ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ದಾಸ ಸಾಹಿತ್ಯ ಪ್ರಕಾರ

ವಾಸುದೇವನ ನಾಮಾವಳಿಯ

( ರಾಗ ಮುಖಾರಿ ಝಂಪೆ ತಾಳ) ವಾಸುದೇವನ ನಾಮಾವಳಿಯ ಕ್ಲ್ ಪ್ತಿಯನು ವ್ಯಾಸರಾಯರ ಪರ್ಯಂತ ವರ್ಣಿಸಿದೆ ನಾನು ||ಪ || ಕೇದಾರ ರಾಮೇಶ್ವರ ಕಿರುಕುಳದ ಭೂತಳದ ಪಾದಾರವಿಂದ ತೀರ್ಥ ಪ್ರತಿ ಕ್ಷೇತ್ರವ ಆದರದಿ ಲಕ್ಷ ಇಪ್ಪತ್ತೈದು ಸಾವಿರ ಕೃತಿಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಸುವದಾದಿಯಲಿ ಗಣನಾಥನ

( ರಾಗ ನಾಟ ಅಟ ತಾಳ) ವಂದಿಸುವದಾದಿಯಲಿ ಗಣನಾಥನ ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು || ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಳಿಸಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲನೋ ಹರಿ ಕೊಳ್ಳನೋ

( ರಾಗ ಕಲ್ಯಾಣಿ ಛಾಪು ತಾಳ) ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ || ಸಿಂಧು ಶತಕೋಟಿ ಗಂಗೋದಕವಿದ್ದು ಗಂಧ ಸುಪರಿಮಳ ವಸ್ತ್ರವಿದ್ದು ಚಂದುಳ್ಳ ಆಭರಣ ಧೂಪದೀಪಗಳಿದ್ದು ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲೆನೆ ವೈದಿಕ ಗಂಡನ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ಒಲ್ಲೆನೆ ವೈದಿಕ ಗಂಡನ ನಾ- ನೆಲ್ಲಾದರು ನೀರ ಧುಮುಕುವೆನಮ್ಮ ||ಪ || ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ ಕೆಟ್ಟ ಸೀರೆಯ ನಾನುಡಲಾರನೆ ಹಿಟ್ಟು ತೊಳಿಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟೆಂತ ಹೇಳಲಿ ಕಷ್ಟದ ಒಗತನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಗಡಿ ಹಾಕೆ ಪೋರಿ

( ರಾಗ ನಾದನಾಮಕ್ರಿಯ ಆದಿ ತಾಳ) ಪಗಡಿ ಹಾಕೆ ಪೋರಿ ತ್ರಿಗುಣಗಳೆಲ್ಲ ಮಾರಿ ||ಪ || ನೇಮದ ಸೀರೆಯನುಟ್ಟು ನಿನ್ನ ಕಾಮದ ಕಚ್ಚೆಯ ಕಟ್ಟು ಪ್ರೇಮದ ಸಜ್ಜನರೊಳಗೆ ನಿಂತು ಮಾತನಾಡೋಣ ಬಾರೆ || ಹಿಂದಕೆ ಹೋಗಲುಬೇಡ ನೀ ಮುಂದಕೆ ಬಂದು ನಿಲ್ಲು ಹಿಂದಿನ ಮುಂದಿನ ಹಂಬಲ ಬಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಪ್ಪಿಸಸಲ್ಲದೊ ಎನ್ನೊಡೆಯನಾಗಿ

( ರಾಗ ಶಂಕರಾಭರಣ ಛಾಪು ತಾಳ) ಒಪ್ಪಿಸಸಲ್ಲದೊ ಎನ್ನೊಡೆಯನಾಗಿ, ಎನ್ನ ತಪ್ಪುಗಳ ಕಾಯಬೇಕು ಅಪಾರಮಹಿಮನೆ ||ಪ|| ಅರಿಷಡ್ವರ್ಗಗಳೆಲ್ಲ ಅವರೊಳಗಿದ್ದು ಪರಿಪರಿಯಿಂದ ಎನ್ನ ಬಾಧಿಸುತಲಿದೆ ಪರರ ಕೈ ಕೊಟ್ಟರಿನ್ನು ಪಾಲಿಪರಾರಯ್ಯ ದುರಿತಾದುರಿತಗಳ ಪರಿಹರಿಸಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ಕೂಗಳತೆ ವೈಕುಂಠ

(ರಾಗ ಕಲ್ಯಾಣಿ ಅಟತಾಳ) ಒಂದೇ ಕೂಗಳತೆ ವೈಕುಂಠ ||ಪ|| ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ||ಅ|| ಸರಸಿಯಲಿ ಆನೆ ಪೊರೆಯೆಂದು ಕರೆಯಲು ತ್ವರಿತದಿ ಬಂದು ಕಾಯ್ದ ನರಹರಿ ಕೃಷ್ಣ ಸಲಹೆಂದು ಚೀರಲು ತರಳ ಪ್ರಹ್ಲಾದಗೆ ಕಂಭದಿಂದಲಿ ಬಂದ || ಅಂಬರೀಷ ದ್ವಾದಶಿವ್ರತ ಮಾಡಲು
ದಾಸ ಸಾಹಿತ್ಯ ಪ್ರಕಾರ
ಬರೆದವರು