ವಾಸುದೇವನ ನಾಮಾವಳಿಯ

ವಾಸುದೇವನ ನಾಮಾವಳಿಯ

( ರಾಗ ಮುಖಾರಿ ಝಂಪೆ ತಾಳ) ವಾಸುದೇವನ ನಾಮಾವಳಿಯ ಕ್ಲ್ ಪ್ತಿಯನು ವ್ಯಾಸರಾಯರ ಪರ್ಯಂತ ವರ್ಣಿಸಿದೆ ನಾನು ||ಪ || ಕೇದಾರ ರಾಮೇಶ್ವರ ಕಿರುಕುಳದ ಭೂತಳದ ಪಾದಾರವಿಂದ ತೀರ್ಥ ಪ್ರತಿ ಕ್ಷೇತ್ರವ ಆದರದಿ ಲಕ್ಷ ಇಪ್ಪತ್ತೈದು ಸಾವಿರ ಕೃತಿಯ ವೇದ ಶಾಸ್ತ್ರ ಪುರಾಣ ವಿವಿಧ ಸಮ್ಮತಿಯಿಂದ || ಸುಳಾದಿ ಅರುವತ್ತನಾಲ್ಕು ಸಾಸಿರ ಬಹು ವ್ರತವು ನಾಮಾ- ವಳಿಯು ಮೂವತ್ತೈದು ಸಾಸಿರವಾಗಿ ನಲಿದು ಶ್ವೇತದ್ವೀಪ ಅನಂತಾಸನ ವೈಕುಂಠ ಸಲೆ ಶೇಷನ ಮಹಿಮೆಯ ಬಣ್ಣಿಸಿದೆನು || ಬ್ರಹ್ಮಲೋಕ ಕೈಲಾಸ ಭರದಿ ದಿಕ್ಪಾಲಕರ ಪ್ರಮೇಯ ಎಂಭತ್ತು ಸಾಸಿರ ಪೇಳಿದೆನು ಸನ್ಮತ ಹಲವು ಕಥೆಸಾರ ತೊಂಭತ್ತು ಸಾಸಿರವು ಒಮ್ಮನದಿ ಹೇಳಿದೆನು ಒದಗಿ ಜನರೆಲ್ಲ ಕೇಳಿ || ಆಹ್ನಿಕ ಗುಣ ಜನ್ಮಾಷ್ಟಮಿ ಏಕಾದಶೀ ನಿರ್ಣಯ ಶ್ರುತಿ ಸಹಿತ ವರ್ಣಿಸಿದೆನು ಅನಘ ಅಗಣಿತ ಮೂರ್ತಿ ಗಂಡಕೀ ಶಿಲೆಯನು ಘನ ಕಲ್ಯಾಣ ದೇಶ ಅರುವತ್ತು ಸಾಸಿರದಿ || ಮಧ್ವರಾಯರ ಮಹಿಮೆ ಮಹಗುರು ಪರಂಪರೆ ಪ್ರ- ಸಿದ್ಧ ವ್ಯಾಸರಾಯರ ಪರಿಯಂತವು ಸಿದ್ಧ ತಂತ್ರಸಾರೋಕ್ತ ಸೇವಕರ ತಾರತಮ್ಯ ಉದ್ಧರಿಸಿ ನಾ ನಿಮಗೆ ಊರ್ವಿಯಲಿ ಪೇಳಿಸಿದೆ || ಅವರವರ ಮೂರ್ತಿ ಧ್ಯಾನ ಅವರವರ ವರ ಕೀರ್ತಿಮಾನ ವಿವರದಲಿ ನಾ ನಿಮಗೆ ವಿಸ್ತರಿಸಿದೆ ಹವಣೆಯಿಂದಿಪ್ಪತ್ತೈದು ಸಾಸಿರ ಕೃತಿಯನ್ನು ಭುವನದಲಿ ಪೇಳಿದೆನು ಬುಧಜನರೆಲ್ಲ ಕೇಳಿ || ಇಂತು ನಾಲ್ಕು ಲಕ್ಷ ಎಪ್ಪತ್ತೊಂಭತ್ತು ಸಾಸಿರ ಕೃತಿಯ ಕಂತುಜನಕನ ನಾಮ ಘನ ಮಹಿಮೆಯ ಸಂತಸದಿ ಶ್ರುತಿ ಸಮ್ಮತಿ ಪ್ರಮಾಣದಲಿ ಶ್ರೀ- ಮಂತ ಪುರಂದರವಿಠಲ ವ್ಯಾಸಮುನಿಗೆ ಪೇಳಿಸಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು