ಸಂದಿತಯ್ಯ ಪ್ರಾಯವು

( ರಾಗ ಕಲ್ಯಾಣಿ ಅಟ ತಾಳ) ಸಂದಿತಯ್ಯ ಪ್ರಾಯವು ಸಂದಿತಯ್ಯ ||ಪ || ಒಂದು ದಿನವು ಸುಖವು ಇಲ್ಲ ಕುಂದಿ ಹೋದೆ ಕಷ್ಟದಿಂದ ಬಂಧನವನು ಬಿಡಿಸುತೆನ್ನ ತಂದೆ ನೀನೆ ರಕ್ಷಿಸಯ್ಯ ||ಅ || ತಂದೆ ಉದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದೆ | ಕುಂದಿತಾಯುವು ಒಂದು ವರುಷ ಇಂದಿರೇಶನೆ ಕೇಳು ದುಃಖವ ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ || ಕತ್ತಲೆಯೊಳಿರಲಾರೆನುತಲಿ ಹೊತ್ತೆ ಹರಕೆಯ ನಿನ್ನೊಳು ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತುಗಳೆದೆನು ಎನ್ನೊಳು | ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಳು ಹತ್ತಿ ಸಂಸಾರದ ಮಾಯಾ ಸಿಕ್ಕಿದೆನು ಭವಬಲೆಯೊಳು || ಎಡೆಬಿಡದೆ ಅನುದಿನದಿ ಪಾಪದ ಕಡಲೊಳಗೆ ನಾ ಬಿದ್ದೆನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಂಸಾರ ಸಜ್ಜಾಗಿಲ್ಲ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗತನವ ||ಪ || ಆರು ಮಂದಿಯು ಗಂಡರಾಳುವರು ಎನ್ನ ಆರು ಮಂದಿಗೆ ಮೂರು ಸುತರೆನಗೆ ಆರು ಮೂರೇಳ್ವರು ಭಾವ ಮೈದುನರೆಲ್ಲ ಆರೇನೆಂದರೆ ಬಿಡರು ಯಾರಿಗುಸಿರಲಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರ್ವಾಪರಾಧವ ಕ್ಷಮಿಸಯ್ಯ

( ರಾಗ ಶಂಕರಾಭರಣ ತ್ರಿಪುಟ ತಾಳ) ಸರ್ವಾಪರಾಧವ ಕ್ಷಮಿಸಯ್ಯ, ಎನ್ನ ಗರ್ವಾಂಧಕಾರವ ಬಿಡಿಸಿ ರಕ್ಷಿಸು ||ಪ || ಎಂದೆಂದು ಹರಿಯರ ನಿಂದಿಸಿದೆನೊ ಚೆಲ್ವ ಚಂದನಗಂಧಿಯರೊಳು ಸರಸವಾಡಿದೆನು ಬಂಧು ಬಂದರೆ ಎನ್ನ ಬಿಗುವ ಬಿಂಕವ ತೋರೆ ಬಂದೋಡ್ವರೈ ಎನ್ನ ಬೇಕೆಂದು ಕೋರದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂತಾನಸರೋವರ ತೀರದಲ್ಲಿ

( ರಾಗ ಧನಶ್ರೀ ಆದಿ ತಾಳ) ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ ನಿನಗೆ ನಮಿಸುವೆನು ||ಪ|| ಅಂತರಂಗದಲ್ಲಿದ್ದ ಅಘಗಳ ಕಳೆದು ಸಂತಾನ ಸೌಭಾಗ್ಯ ಕೊಡುವ ದೀನಬಂಧು || ವೃಂದಾಚರಣದಲ್ಲಿ ನಂದ ವಾಲ್ಮೀಕದಲ್ಲಿ ಚಂದದಿ ಮೇಸುದಿದ್ದ ಅಲ್ಲಿಂದ ಬಂದ ದೊರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಕ್ತನಾದರೆ ನೆಂಟರೆಲ್ಲ ಹಿತರು

( ರಾಗ ಕಾಂಭೋಜ ಝಂಪೆ ತಾಳ) ಶಕ್ತನಾದರೆ ನೆಂಟರಲ್ಲ ಹಿತರು ||ಪ || ಅಶಕ್ತನಾದರೆ ಅವರೆ ವೈರಿಗಳು ಲೋಕದಲಿ ||ಅ || ಕಮಲಾರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಓಡಾಡುತಿಹುದು ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿ ಹೋಗುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೆರಗ ಬಿಡೋ ರಂಗ

( ರಾಗ ಕೇದಾರಗೌಳ ಅಟ ತಾಳ) ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ ಸೆರಗ ಬಿಡೋ ||ಪ || ಅತ್ತೆ ಕಂಡರೆ ಎನ್ನ ಹತ್ತಿರ ಸೇರಳು ಹರಿಯೆ ಚಿತ್ತದೊಲ್ಲಭ ಎನ್ನ ಸೆರಗ ಬಿಡೋ || ಮಾವ ಕಂಡರೆ ಎನ್ನ ಜೀವ ಬಿಡನು ಹರಿಯೆ ಜೀವದೊಲ್ಲಭ ಎನ್ನ ಸೆರಗ ಬಿಡೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿಕ್ಕಿದನೆಲೆ ಜಾಣೆ

( ರಾಗ ಮುಖಾರಿ ಅಟ ತಾಳ) ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ ಭಕ್ತವತ್ಸಲ ದೇವನು ||ಪ || ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ ||ಅ || ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಹಚ್ಚಿಕೊಂಡು ಬಣ್ಣ ವಸ್ತ್ರವ ಬಿಚ್ಚಿ ಬತ್ತಲಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ

( ರಾಗ ಆರಭಿ ಅಟ ತಾಳ) ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ ಧೃಢ ಮತಿಯುಳ್ಳವರು ||ಪ || ಜ್ಞಾನ ಭಕ್ತಿ ವೈರಾಗ್ಯಾದಿ ಜ್ಞಾನವೆಮ್ಮ ನಿರತ ಬರಲು ಧ್ಯಾನಿಸುವ ಸನ್ನಿಧಿಯಲ್ಲಿ ಸಾನುರಾಗದಿಂದ ಪಾಡಿ ||ಅ || ಬಂದ ದುರಿತಗಳನೆಲ್ಲ ದಿನ ದಿನ ತಾನೊಂದು ಗಳಿಗೆ ಹಿಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರೀರಕ್ಕೆ ಬರುತಿದೆ ವೆಚ್ಚ

( ರಾಗ ನಾದನಾಮಕ್ರಿಯ ಛಾಪು ತಾಳ) ಶರೀರಕ್ಕೆ ಬರುತಿದೆ ವೆಚ್ಚ, ನೀ- ನಿರು ಬೇಗ ಪಯಣದಿಂದೆಚ್ಚತ್ತು ನಿಚ್ಚ ||ಪ || ಮರಣ ಕಾಲವು ಮುಂದೆ ಬಂತು, ಈ ಧರಣಿಯ ಮೇಲೆ ಇರುವ ಋಣವೆಲ್ಲ ಸಂತು ತರಳ ಯೌವನ ವೃದ್ಧನಿಂತು, ನೀನು ಹರಿಯ ಪೂಜೆಯ ಮಾಡದಿರಬೇಡ ಭ್ರಾಂತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ಮುಖ್ಯಪ್ರಾಣ

( ರಾಗ ಆನಂದಭೈರವಿ ಆದಿ ತಾಳ) ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ ನೀ ಹಿಡಿದ್ಯೋ ರಾಮನ ಚರಣ , ನೀ ನ್ಹೌದೌದೊ ಜಗತ್ಪ್ರಾಣ || ಸಂಜೀವಿನಿ ಪರ್ವತವ, ನೀ ನಂಜದೆ ತಂದ್ಯೋ ನೀನು ಅಂಜನೆಸುತ ಸದಾಕಾವ, ಹೃ- ತ್ಕಂಜವಾಸ ಸರ್ವಜೀವ || ಏಕಾದಶಿಯ ರುದ್ರ , ನೀ
ದಾಸ ಸಾಹಿತ್ಯ ಪ್ರಕಾರ
ಬರೆದವರು