ಒಲ್ಲೆನೆ ವೈದಿಕ ಗಂಡನ

ಒಲ್ಲೆನೆ ವೈದಿಕ ಗಂಡನ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ಒಲ್ಲೆನೆ ವೈದಿಕ ಗಂಡನ ನಾ- ನೆಲ್ಲಾದರು ನೀರ ಧುಮುಕುವೆನಮ್ಮ ||ಪ || ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ ಕೆಟ್ಟ ಸೀರೆಯ ನಾನುಡಲಾರನೆ ಹಿಟ್ಟು ತೊಳಿಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟೆಂತ ಹೇಳಲಿ ಕಷ್ಟದ ಒಗತನ || ಕೃಷ್ಣಾಜಿನವನ್ನು ರಟ್ಟೆಲಿ ಹಾಕಿಕೊಂಡು ಬೆಟ್ಟಿಲಿ ಗಿಂಡಿಯ ಹಿಡಿದಿಹನೆ ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ನಿನ್ನಾಣೆ ಹುಸಿಯಲ್ಲ ಬಿನ್ನಾಣ ಮಾತಲ್ಲ ಕಣ್ಣು ಸನ್ನೆಯಂತು ಮೊದಲೆ ಇಲ್ಲ ಮುನ್ನಿನ ಜನ್ಮದಲ್ಲಿ ಪುರಂದರವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು