ವೆಂಕಟೇಶ ನಿನ್ನ ನಾಮಕ್ಕೆ
( ರಾಗ ಸಿಂಧುಭೈರವಿ ಆದಿ ತಾಳ)
ವೆಂಕಟೇಶ ನಿನ್ನ ನಾಮಕ್ಕೆ, ಮೊದಲು ನಾಕಕ್ಷರಗಳು ನೋಡೈ ||ಪ ||
ಬಿಂಕವಾದ ನಾಲ್ಕು ವೇದ ಶಾಸ್ತ್ರ ಪುರಾಣಗಳಿದರಿಂದೈ ||ಅ||
ವೇದವೊಯ್ದನ ಸಾಗಿಸಿ ಗೆದ್ದೆ ಮೊದಲು ನೀನಲ್ಲವೆ
ವೇಷವ ತಾಳಿದೆ ಶರಧಿಯ ಮಥನ ಲೇಸು ನಿನಗಲ್ಲವೆ
ವೇಗದಿಂದಲಿ ಎತ್ತಿ ದೈತ್ಯನ ಸೀಳಿದೆ ನೀನಲ್ಲವೆ
ವೆಕ್ಕಸ ಇಹ ಪಾತಕನ ಕರುಳು ನಿನಗೆ ಒಂದು ಮಾಲೆಯಾಗಿಲ್ಲವೆ ||
ಕಮ್ಮು ಮಾಡಿ ಮೂರುತಿಯಲ್ಲಿ ಬಲಿಯ ಹಾಕಿದೆ ಪಾತಾಳಕ್ಕೆ
ಕಲ್ಮಷನುಡಿಯ ಸುತನ ಕೈಯ ಮಾತೆಯ ಕೊಲ್ಲೋದಕ್ಕೆ
ಕಡ ನಿಲ್ಲದೆ ವನವಾಸಕ್ಕೆ ಬಂದೆ ಸೀತೆಯ ಹುಡುಕುವದಕ್ಕೆ
ಕಂಸ ಮಾವನ ಕೊಂದೆ ತಂದೆ ತಾಯಿಗಳ ಬಿಡಿಸೋದಕ್ಕೆ ||
ಟೀಕಿ ಮಾಡಿ ಮೂರ್ಪುರ ಸತಿಯರ ವ್ರತವ ಕೆಡಿಸಿಬಿಟ್ಟೆ
ಟಕ್ಕಿಸಿ ಎಡಬಲ ಲಕ್ಷ್ಮಿಯ ತೆಗೆದು ವಕ್ಷಸ್ಥಳದಲಿಟ್ಟೆ
ಟಂಕಿ ಬೆಳ್ಳೆ ಟಂಕಿ ನರಲೋಕಕ್ಕೆ ಉಡುಪಿಗೆ ಮನಸಿಟ್ಟೆ
ಟೇರ್ಕೋಡಿಯಲಿ ಠಾಣವ ಹಾಕಿದೆ ಜಗವ ಕುದುರೆ ಬಿಟ್ಟೆ ||
ಶಾಕದ ತುದಿಯಲ್ಲಿ ಶಾಂತಪಾಂಡವರು ದ್ರೌಪದಿವನವಾಸ
ಶ್ಯಾಮಸುಂದರ ಶರಣು ಸಜ್ಜನ ಗುರುಚಂದ್ರಭಾಸ
ಶಾಮ ಸಹಿತ ಬಹು ಮುಕ್ತಿಯ ಪೊಂದಿದ ರುಕ್ಮಾಂಗದ ಪೋಷ
ಶಾಶ್ವತ ಸಲಹುವ ಪುರಂದರವಿಠಲ ಕಲಿಯುಗ ವೆಂಕಟೇಶ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments