ನಂದತನಯ ಗೋವಿಂದನ ಭಜಿಪುದಾನಂದ

(ರಾಗ ಖಮಾಸ್ ಅಟತಾಳ / ರಾಗ ಬಾಗೇಶ್ರೀ ಖಂಡಛಾಪು ತಾಳ ) ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ|| ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ || ದಧಿ ಘೃತ ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ ಕದಳಿ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದೀ ಮಿಠಾಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ

೪-೧೩೧ (ರಾಗ ಬೇಹಾಗ್ ಆದಿತಾಳ ) ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ ||ಪ || ಆದಿಯಲ್ಲಿ ಕರಿ ಮಕರಿಕೆ ಸಿಕ್ಕಿ ಬಾಧೆಯಿಂದ ಆದಿದೇವ ಕಾಯೆಂದು ಮೊರೆಯಿಡಲು ಆ ದೇವ ಈ ದೇವ ಕಾಯ್ದುದಿಲ್ಲ ಕೇಳಿ ಮಾಧವ ತಾ ಬಂದು ಸಲಹಿದ ಕಾರಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಸಿಂಹನೆಂಬೊ ದೇವನು

(ರಾಗ ಸುರಟಿ ಆದಿತಾಳ ) ನಾರಸಿಂಹನೆಂಬೊ ದೇವನು, ನಂಬಿದಂಥ ನರರಿಗೆಲ್ಲ ವರವ ಕೊಡುವನು ||ಪ || ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ ಸುತನ ಬರೆದು ತೋರು ಎಂಬಾಗ ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣನೆಂಬ ನಾಮವ

(ರಾಗ ಬಿಲಹರಿ ಅಟತಾಳ ) ನಾರಾಯಣನೆಂಬ ನಾಮವ ನಿಮ್ಮ ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ||ಪ|| ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ ಶ್ವಾಸೋಚ್ಛ್ವಾಸ ಎರಡೆತ್ತು ಮಾಡಿ ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ ನಿರ್ಮಮವೆಂಬ ಗುಂಟೆಲಿ ಹರವಿರಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಂಟನು ಸಣ್ಣವನೆಂದು

(ರಾಗ ಶಂಕರಾಭರಣ ಆದಿ ತಾಳ ) ನೆಂಟನು ಸಣ್ಣವನೆಂದು ನಂಬಿದೆನಮ್ಮ ಗಂಟುಕಳ್ಳನೆಂದರಿಯದೆ ಕಾಂತೆ ಕೇಳು ಶ್ರೀ ಕೃಷ್ಣನ || ಪ|| ಗೊಂಬೆಯ ಮದುವೆಗೆ ಎಂದು ಸಂಭ್ರಮದಲ್ಲಿ ಬಾರೆಂದು ಬೆಂಬಿಡದೆನ್ನನು ಬಂದು ಚುಂಬಿಸಿದನಲ್ಲೆ ಇಂದು || ಪುಟ್ಟ ಮಕ್ಕಳೊಳಗೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಮ್ಮನೆಲ್ಲಿಹ ತೋರಮ್ಮ

( ರಾಗ ತೋಡಿ ಆದಿ ತಾಳ) ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ ||ಪ|| ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು ಹಂಚಿಸಿ ಕೊಟ್ಟನೆ ಅವರವರಿಗೆ ನಾ ಹಾಂಗು ನೋಡಿದರು ಕಾಣೆನೆ ಗುಮ್ಮನ || ಸಿಂಧುವಿನೊಳಗೆ ಆನಂದದಿ ಮಲಗಿದ್ದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊರಡುತಾನೆ ಚೆನ್ನ ಕೃಷ್ಣ

( ರಾಗ ಪುನ್ನಾಗವರಾಳಿ ಆದಿ ತಾಳ) ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ || ಪ|| ಚಿಕ್ಕ ಮಗು ಎಂದು ನಾವು ಮುದ್ದಾಡಹೋದರೆ ಸೊಕ್ಕುತಲೆ ಬಂದು ಎನ್ನ ಕಕ್ಕಸ ಕುಚಗಳ ಪಿಡಿದು ಮಕ್ಕಳ್ಹುಟ್ಟುವರೆಂದು ಘಕ್ಕನೆ ರಟ್ಟೆಯ ಪಿಡಿದು ಕಕ್ಕುಲತಿ ಮಾಡಿ ಪೋದ ಏನು ಮಾಡಲೆ ನಾನೇನು ಮಾಡಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಂತಕಾರಿ ನೀನೇವೆ

( ರಾಗ ಬೇಹಾಗ್ ಛಾಪು ತಾಳ) ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ|| ಶಾಂತ ಅತಿ ಬಲವಂತ ಅಂತವಿದೂರ ಶಾಂತ ದಾಂತ ಸುರಕಾಂತ ಹಂತ ವೇದಾಂತ ದೈತ್ಯ ಹಂತ ವಾದದು- ರಂತ ನುತ ನಿಯಂತ ಯುಕ್ತಿವಂತ || ಸಾಗರವನು ಬಲು ವೇಗದಿಂದಲಿ ದಾಟಿ ಬೇಗ ಲಂಕೆಗೆ ಪೋಗಿ ಆಗ ಬಂದ ದೈತ್ಯರ ನೀಗಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಳಬಾರದೆ ಬುದ್ಧಿಯ ನಿನ್ನ

( ರಾಗ ಕಲ್ಯಾಣಿ ಅಟತಾಳ) ಹೇಳಬಾರದೆ ಬುದ್ಧಿಯ, ನಿನ್ನ ಮಗನ ಊರುಗೂಳಿಯ ಮಾಡಿದೇವೆ ||ಪ|| ಓಣೋಣಿಗುಂಟೆ ವಾರಿಗೆಯರ ಕೂಡಿ ಗೋವಳೇರ ಕೇರಿ ಹಾಳು ಮಾಡುತಿದ್ದಾನೆ ||ಅ|| ಅಟ್ಟದ ಮೇಲಿಟ್ಟ ಚಿಟ್ಟೆಗೆ ಹಾಲಲಿ ಬೊಟ್ಟನಿಕ್ಕಿ ಚೀಪುವ ದುಷ್ಟತನ ಮಾಡಬೇಡವಯ್ಯ ಎನ್ನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೆಚ್ಚನಯ್ಯ ಹರಿ ಒಪ್ಪನಯ್ಯ

(ರಾಗ ಯದುಕುಲಕಾಂಭೋಜ ಆದಿ ತಾಳ ) ಮೆಚ್ಚನಯ್ಯ ಹರಿ ಒಪ್ಪನಯ್ಯ ||ಪ|| ರಚ್ಚೆಮುಚ್ಚೆ ಮಾಡಿ ಹರಿಯ ಮೆಚ್ಚಿಸುವೆನೆಂದರೆ ||ಅ|| ಊರೆಲ್ಲರು ಅರಿಯುವಂತೆ ಅರುಣೋದಯದಲ್ಲಿ ಎದ್ದು ನೀರೊಳಗಿನ ಕಪ್ಪೆಯಂತೆ ಮುಳುಗಿ ಮುಳುಗಿ ಎಳುವವರ || ಚರ್ಮವ ತೊಳೆದಿಟ್ಟು ಗೋಪಿಚಂದನ ರೇಖೆಯ ಬರೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು