ದಶಾವತಾರ

ಒಲಿದೆ ಯಾತಕಮ್ಮಾ ಲಕುಮಿ?

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ? ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಒಲಿದೆ ಯಾತಕಮ್ಮಾ ಲಕುಮಿ?|| ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ದಾಸ ಸಾಹಿತ್ಯ ಪ್ರಕಾರ

ಕೊಟ್ಟು ಹೋಗೆನ್ನ ಸಾಲವ

(ರಾಗ ಶಂಕರಾಭರಣ ಅಟತಾಳ) ಕೊಟ್ಟು ಹೋಗೆನ್ನ ಸಾಲವ , ಕಣ್ಣ ಬಿಟ್ಟರಂಜುವನಲ್ಲ ಹೊರುಕಲ್ಲ ಕೃಷ್ಣ ||ಪ|| ಕಾಲ ತೂಗಿ ಭೂಮಿ ದಾಡೆಯೊಳಿಟ್ಟರೆ ಮೇಲೆ ನೆಗೆದು ಬಾಯಿ ಬಿಟ್ಟರೆ ಏಳು ವರ್ಷದ ಬಡ್ಡಿ ಮೂಲ ಸಹಿತವಾಗಿ ತಾಳುವನಲ್ಲೇಳೋ ತಿರುಕ ಮುಂಡಾಳಿ || ಕೊರಳಗೊಯಿಕ ಪೂರ್ವ ಸಾಲವ ಕೊಡದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳಿದೆ ನಿನ್ನಯ ಸುದ್ದಿ

(ರಾಗ ಶಂಕರಾಭರಣ ಅಟತಾಳ) ಕೇಳಿದೆ ನಿನ್ನಯ ಸುದ್ದಿ , ಕೇಳಿದೆ || ನೀರೊಳು ಮುಳುಗಿದೆಯಂತೆ , ದೊಡ್ಡ ಭರ ಗಿರಿಯ ಪೊತ್ತೆಯಂತೆ , ಗಡ್ಡೆ ಬೇರು ಗೆಣಸ ಮೆದ್ದೆಯಂತೆ , ಅಹ ಮೂರೆರಡರಿಯದ ತರಳನ , ಮಾತಿಗೆ ಘೋರ ದಾನವನ ಸಂಹಾರ ಮಾಡಿದೆಯೆಂದು || ನಾರಿಯೊಬ್ಬಳ ಪೆತ್ತೆಯಂತೆ , ಹೆತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಪಲ್ಲವಿ: ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ : ಅಂಬುಜನಾಭ ದಯದಿಂದ ಎನ್ನ ಮನೆಗೆ ಚರಣಗಳು: ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥವನೆಂಥವನೆ ರಂಗಯ್ಯ

ಪಲ್ಲವಿ: ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ ಚರಣ: ೧: ಆಗಮವನು ತಂದವನೆ ರಂಗ ಬೇಗದಿ ಗಿರಿಯ ಪೊತ್ತವನೆ ಮೂಗಿಂದ ಭೂಮಿಯನೆತ್ತಿದನೆ ಶಿಶು ಕೂಗಲು ಕಂಭದಿಂದೊದಗಿದನೆ ಕೃಷ್ಣ ೨: ಧರಣಿಯ ಈರಡಿ ಮಾಡಿದನೆ ಭೂ- ಸುರನಾಗಿ ಪರಶುವ ಧರಿಸಿದನೆ ಭರದಿ ಕೋಡಗ ಹಿಂಡ ಕೂಡಿದನೆ ಫಣಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ|| ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹಾವತಾರಗೆ ತರಳನ್ನ ಕಾಯ್ದಂಥ ನರಸಿಂಹಗೆ ||೧|| ಭೂಮಿಯ ದಾನವ ಬೇಡಿದವಗೆ ಆ ಮಹಾಕ್ಷತ್ರಿಯರ ಗೆಲಿದವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವಗೇಕೆ ಪರಿಮಳ ?

ಪಲ್ಲವಿ: ಇವಗೇಕೆ ಪರಿಮಳ ಇವಗೇಕೆ ಶೃಂಗಾರ ? ಅನುಪಲ್ಲವಿ: ನವನೀತ ಚೋರ ನಾರುವ ಗೊಲ್ಲಗೆ ? ಚರಣ: ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ? ತಲೆದೋರುವವಗೇಕೆ ದಟ್ಟ ಪುನುಗು ? ಬಲು ಕೇಶದವಗೇಕೆ ಬಾವನ್ನದಾ ಲೇಪ ? ಸಲೆಕುರೂಪಿನವಗೇಕೆ ಮಂಡೆಸಾದು* ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವಗೇಕೆ ಶೃಂಗಾರ?

ಪಲ್ಲವಿ: ಇವಗೇಕೆ ಶೃಂಗಾರ? ಇವಗೇಕೆ ಬಂಗಾರ? ಅನುಪಲ್ಲವಿ: ಕಾಡ ಕರಡಿಯಂತೆ ಪೋಲುವ ದೇಹಕ್ಕೆ ಚರಣಗಳು: ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ? ಕೋರೆ ದಾಡೆಯ ಘೋರ ಮುಖಗೇಕೆ ಕನ್ನಡಿ ಕರುಳ ಹಾರ ಧರಿಸಿದವಕೆ ಹಾರ ಪದಕವೇಕೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಂಕಜ ಮುಖಿಯರೆಲ್ಲರು ಬಂದು

ಪಲ್ಲವಿ: ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ಚರಣ: 1: ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ 2:
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಕುಟಕ್ಕೆ ಮಂಗಳ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್ಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಗಗೆ ವಕ್ಷಕ್ಕೆ ಮಂಗಳ ವಟು ವಾಮನನಿಗೆ ಪಕ್ಷಕ್ಕೆ ಮಂಗಳ ಭಾರ್ಗವಗೆ ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ ಕುಕ್ಷಿಗೆ ಮಂಗಳ ಕೃಷ್ಣರಾಯಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು