ಮೆಚ್ಚದಿರು ಈ ಭಾಗ್ಯ

(ರಾಗ ಕಾಂಭೋಜ ಝಂಪೆ ತಾಳ ) ಮೆಚ್ಚದಿರು ಈ ಭಾಗ್ಯ ಹುಚ್ಚು ಮಾನವ ||ಪ || ವೆಚ್ಚವಾಗ್ಹೋಗುವುದು ಏಸೊಂದು ಪರಿಯ ||ಅ|| ಹದಿನೆಂಟು ಕೋಟಿ ಧನ ಉದಯಕಾಲಕೆ ಬರಲು ಒದಗಿದಾಗಾಗಲೇನು ಕರ್ಣಗೆ ಹದವರಿದು ಹಾಗದಾ ಕಾಸಿಲ್ಲದೇ ಕೊಟ್ಟು ತುದಿಗೆ ಮಧ್ಯಾಹ್ನ ದಾರಿದ್ರನೆನಿಸುವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸರೆಂದರೆ ಪುರಂದರದಾಸರಯ್ಯ

ದಾಸರೆಂದರೆ ಪುರಂದರ ದಾಸರಯ್ಯ! ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ದಾಸರೆಂದರೆ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಳಸೀಮಾಲೆ ಧರಿಸಿ ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ ಕಾಸು ಗಳಿಸುವ ಪುರುಷ ಹರಿದಾಸನೇ? ||ದಾಸರೆಂದರೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಂಬಿದೆ ನೀರಜನಯನ

(ರಾಗ ಮೋಹನ ತ್ರಿಪುಟತಾಳ ) ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ ||ಪ|| ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ ಪನ್ನಗಶಯನ ನೀ ಪರಮ ಪುರುಷನೆಂದು ||ಅ|| ಹರಿ ಸರ್ವೋತ್ತಮನಹುದೆಂಬೊ ಬಾಲಕನ ಹಿರಣ್ಯಕಶಿಪು ಪಿಡಿದು ಬಾಧಿಸಲು ನರಹರಿ ರೂಪದಿಂದವನ ವಕ್ಷವ ಸೀಳ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಾಮವೆ ಎನಗೆ ಅಮೃತಾನ್ನವು

(ರಾಗ ಕೇದಾರಗೌಳ ಅಟತಾಳ ) ನಿನ್ನ ನಾಮವೆ ಎನಗೆ ಅಮೃತಾನ್ನವು ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ|| ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ ಶಂಖಪಾಣಿಯ ನಾಮ ಶಾಕಾದಿ ಸೂಪ ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಬನ್ನಿರೋ ಜನರು

(ರಾಗ ಪೂರ್ವಿ ಅಟತಾಳ ) ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ ಜೋಡು ದೀವಟಿಗೆ ಸೇವೆ ||ಪ|| ನೋಡಿಯ ನಮ್ಮಯೆ ಮನದ ಇಷ್ಟಾರ್ಥವ ಬೇಡಿ ಶರಣು ಪೊಗುವ ಪದಯುಗವ ||ಅ|| ಅಂಜಿಕೆ ಪರಿಹರ ಅಸುರ ಭಂಜನನಾದ ಕಂಜಾಕ್ಷ ಶ್ರೀ ಕೃಷ್ಣನಿದಿರೊಳು ನಿಂದು ಸಂಜೆಯ ವೇಳ್ಯದಿ ರಾಜಿಪ ರಜತದ ಪಂಜುಸೇವೆಯ ಕರಾಂಜಲಿಯನೆ ಮುಗಿದು || ನೆರೆದ ಜನರ ಮುಂದೆ ಗುರುರಾಯ ತಾ ಬಂದು ಕರವ ಮುಗಿದು ನಿಂದಿರುತಿಪ್ಪ ಸಮಯದಿ ಪರಿಪರಿ ವಿನಿಯೋಗದವರೆಲ್ಲ ತಾವ್ತಮ್ಮ ಸರತಿ ತಪ್ಪದೆ ಬಂದು ಇರುತಿಪ್ಪ ಸೊಬಗನು || ಪಂಚ ಮುಖದ ಜ್ಯೋತಿ ಬೆಳಗಲು ಎಡಬಲ ಸಂಚರಿಸುವ ಪೊಮ್ಮರಿ ಮೃಗ ಚೌರಿಯ ಕಾಂಚನಮಯದ ಕಟ್ಟಿಗೆ ಕೋಲ ಹಸುವಿನ(/ಹಸುರಿನ?) ಲಾಂಛನವಾದಗೆ ಹಾಕುವ ಪರಿಯ || ಬಟ್ಟಲ ವೀಳ್ಯ ವಿಶಿಷ್ಟ ಲಾಜಾಕ್ಷತೆ ಪುಟ್ಟ ಕದಳಿ ಬೆಲ್ಲ ಕಸ್ತೂರಿಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನದು ನಿನಗೆ ಬಾರಿಸಿ ಕೊಟ್ಟೇನು

(ರಾಗ ಸೌರಾಷ್ಟ್ರ ಅಟತಾಳ ) ನಿನ್ನದು ನಿನಗೆ ಬಾರಿಸಿ ಕೊಟ್ಟೇನು ತಾರೇ ದಂಡಿಗೆಯ || ||ಪ|| ಗಂಗಾಳ ಕಣ್ಣಂತೆ ಅಂಗಳ ಹೊರಗಂತೆ ಕಂಗಳಿಲ್ಲದವ ಕುರುಡನಂತೆ ತಾರೇ ದಂಡಿಗೆಯ || ಮಂಡಿಗೆಯ ಸವಿಯಂತೆ ಸಂಡಿಗೆ ಖಾರಂತೆ ಗಂಡುಳ್ಳಳು ಮುತ್ತೈದಂತೆ ತಾರೇ ದಂಡಿಗೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉದರವೈರಾಗ್ಯವಿದು

( ರಾಗ ನಾದನಾಮಕ್ರಿಯೆ ಆದಿತಾಳ) ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ || ಉದಯಕಾಲದಲೆದ್ದು ಗದಗದ ನಡುಗುತ ನದಿಯಲಿ ಮಿಂದೆನೆಂದು ಹಿಗ್ಗುತಲಿ ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉಬ್ಬದಿರು ಉಬ್ಬದಿರು

( ರಾಗ ಕಾಂಭೋಜ ಝಂಪೆತಾಳ) ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ|| ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ ||ಅ|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು ಬಳಲಲೇಕೋ ನಾಗಹೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೃಂದಾವನದೊಳು ಆಡುವನಾರೇ

( ರಾಗ ಶ್ರೀ / ಮಾಂಡ್ ಆದಿತಾಳ)

 

ವೃಂದಾವನದೊಳು ಆಡುವನಾರೇ ಗೋಪಿ

ಚಂದಿರವದನೆ ನೋಡುವ ಬಾರೆ ||ಪ||

 

ಅರುಣಪಲ್ಲವ ಪಾದಯುಗಳನೆ, ದಿವ್ಯ

ಮರಕತ ಮಂಜುಳಾಭರಣನೆ

ಸಿರಿವರ ಯದುಕುಲಸೋಮನೆ, ಇಂಥ

ಪರಿಪೂರ್ಣ ಕಾಮನಿಸ್ಸೀಮನೆ ||

 

ಹಾರಹೀರಗುಣಧಾರನೆ, ದಿವ್ಯ

ಸಾರಶರೀರ ಶೃಂಗಾರನೆ

ಆರಿಗಾದರು ಮನದೂರನೆ, ತನ್ನ

ಸೇರಿದವರ ಮಾತ ಮೀರನೆ ||

 

ಮಕರಕುಂಡಲ ಕಾಂತಿಭರಿತನೆ, ದಿವ್ಯ

ಅಕಳಂಕರೂಪಲಾವಣ್ಯನೆ

ಸಕಲರೊಳಗೆ ದೇವನೀತನೆ, ನಮ್ಮ

ಮುಕುತೀಶ ಪುರಂದರವಿಠಲನೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ವೃಂದಾವನದೇವಿ ನಮೋ ನಮೋ

( ರಾಗ ಮಧ್ಯಮಾವತಿ ಆದಿತಾಳ) ವೃಂದಾವನದೇವಿ ನಮೋ ನಮೋ, ಚೆಲ್ವ ಮಂದರಧರನ ಮನಃಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ|| ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಹೋಗುವುದು ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ಉನ್ನಂತ ವೈಕುಂಠ ಪದವೀವಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು