ನಿನ್ನ ಮಹಿಮೆಯನು ಪೊಗಳುವರೆ

(ರಾಗ ಸೌರಾಷ್ಟ್ರ ಆದಿತಾಳ ) ನಿನ್ನ ಮಹಿಮೆಯನು ಪೊಗಳುವರೆ ಎನ್ನಳವಲ್ಲ ವಿಚಿತ್ರಚರಿತ್ರ ||ಪ || ಪಾಲುಗಡಲು ಮನೆಯಾಗಿರಲು ಒಂ- ದಾಲದೆಲೆಯ ಮೇಲೆ ಮಲಗುವರೆ ಮೂಲೋಕವು ನಿನ್ನ ಉದರದೊಳಿರುದಿರೆ ಬಾಲಕನಾಗಿ ಎತ್ತಿಸಿಕೊಂಬರೆ || ಸಿರಿ ನಿನ್ನ ಕೈವಶವಾಗಿರಲು ನೀ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗನು ಮುದ್ದು ನಿನಗಾದರೆ

(ರಾಗ ಸೌರಾಷ್ಟ್ರ ಅಟತಾಳ ) ನಿನ್ನ ಮಗನು ಮುದ್ದು ನಿನಗಾದರೆ ಗೋಪಿ ಯಾರಿಗೇನೆ, ಅಮ್ಮ ಎನ್ನ ಕೂಡೆ ತಾ ಸರಸವಾಡುತಾನೆ ಸಾರು ನೀನೆ || ಪ || ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ, ಅಮ್ಮ ಇಚ್ಚೆಯರಿತು ನಮ್ಮ ಗಲ್ಲವ ಕಚ್ಚುವ ನಲ್ಲನೇನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರೇ ರಂಗನ ಯಾರೇ ಕೃಷ್ಣನ

( ರಾಗ ಹಿಂದೋಳ ಆದಿತಾಳ) ಯಾರೇ ರಂಗನ ಯಾರೇ ಕೃಷ್ಣನ ಯಾರೇ ರಂಗನ ಕರೆಯಬಂದವರು ||ಪ|| ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು || ವೇಣುವಿನೋದನ ಪ್ರಾಣಪ್ರಿಯನ ಜಾಣೆಯರರಸನ ಕರೆಯಬಂದವರು || ಕರಿರಾಜವರದನ ಪರಮಪುರುಷನ ಪುರಂದರವಿಠಲನ ಕರೆಯಬಂದವರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ನೀ ಬೇಗನೇ ಬಾರೋ

ಕೃಷ್ಣ ನೀ ಬೇಗನೇ ಬಾರೋ |ಪ| ಬೇಗನೆ ಬಾರೋ ಮುಖವನ್ನು ತೋರೋ|ಅ.ಪ| ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ| ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿಮಾಲ| ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈತನೀಗ ವಾಸುದೇವನು

ಈತನೀಗ ವಾಸುದೇವನು ಲೋಕದೊಡೆಯ| ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ| ಧನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ ಅನುಜೆಯಾಳಿದವನ ಶಿರವ ಕತ್ತರಿಸುತಾ| ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದಾ ರುಕ್ಮನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರಿಗೆ ದೂರುವೆನೋ

( ರಾಗ ಮುಖಾರಿ ಅಟ ತಾಳ) ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ ||ಪ || ಸಾರಿದ್ದ ಭಕ್ತಸಂಸಾರಿ ನಿನ್ನಯ ಪದ- ವಾರಿಜವನು ತೋರೊ ಕಾರುಣ್ಯನಿಧಿ ಬೇಗ ||ಅ || ಕಷ್ಟ ಜನ್ಮದಿ ಬಂದೆನೋ, ಧಾರುಣಿಯೊಳು ದುಷ್ಟರಿಂದಲಿ ನೊಂದೆನೋ ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರಿದ್ದರೇನಯ್ಯ

( ರಾಗ ಮುಖಾರಿ ಝಂಪೆ ತಾಳ) ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಪ| ದುರುಳ ಕೌರವನಂದು ದ್ರುಪದಜೆಯ ಸೀರೆಯನು ಕರದಿಂದ ಸೆಳೆಯುತಿರೆ ಪತಿಗಳೆಲ್ಲ ಗರಹೊಯ್ದಂತಿದ್ದರಲ್ಲದೇ ನರಹರಿಯೆ ಕರುಣದಿಂ ನೀನಲ್ಲದಿನ್ಯಾರು ಕಾಯ್ದವರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಶೋದೆಯಮ್ಮ ಎನ್ನನು ಎತ್ತಿಕೊಳ್ಳಮ್ಮ

( ರಾಗ ಭೈರವಿ ಆದಿ ತಾಳ) ಯಶೋದೆಯಮ್ಮ, ಎನ್ನನು ಎತ್ತಿಕೊಳ್ಳಮ್ಮ || ಬಿಸಿನೀರು ಕಾಸಬೇಡೆ ಅಮ್ಮ ನೀನು ಗುಕ್ಕುಚಿ ಮಾಡಬೇಡೆ ಬಿಸಿ ಮೊಮ್ಮ ಉಪ್ಪಿನಕಾಯಿ ಅಮ್ಮ ನಾನು ಉಣಲಾರೆ ಉತ್ತುತ್ತೆ ಹಣ್ಣು ಬೆಣ್ಣೆ ತಿಂದೇನೆ || ಕಳ್ಳ ಕೃಷ್ಣ ಎನ್ನುತಾರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾವಾಗಲು ಹೇಳಬಾರದೆ

( ರಾಗ ಆರಭಿ ಅಟ ತಾಳ) ಯಾವಾಗಲು ಹೇಳಬಾರದೆ, ವಾಸು- ದೇವನೆ ಕೈ ಬಿಡಬೇಡವೆಂದೆನುತಲಿ ||ಪ|| ಇಕ್ಕಿ ಎರೆವರಿಲ್ಲ ಇಷ್ಟ ಬಂಧುಗಳಿಲ್ಲ ಅಕ್ಕತಂಗಿಯರಣ್ಣ ತಮ್ಮರಿಲ್ಲ ಒಕ್ಕಟಿಯಾಗಿ ನಾ ಬಳಲುತ್ತಲಿ ಸದಾ ದುಃಖಪಡುವೆನೆಂದು ರಕ್ಕಸಾಂತಕನೊಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಧಾತೃ ದೇವತೆಗಳೆಲ್ಲ

( ರಾಗ ಕಾಂಭೋಜ ಝಂಪೆ ತಾಳ) ವಿಧಾತೃ ದೇವತೆಗಳೆಲ್ಲ ವಿಷ್ಣುವಿನ ಹಿಂದೆ ಇದಕೆ ನಾ ಫಣಿ ಫಣ ಕೈಯಾಗೆ ಪಿಡಿವೆ ||ಪ|| ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ ಸಕಲ ವೃಕ್ಷಗಳೆಲ್ಲ ಶ್ರೀತುಲಸಿ ಹಿಂದೆ ಪ್ರಕಟ ಗ್ರಂಥಗಳು ಭಾಗವತದ್ಹಿಂದೆ ಲೋಕದೊಳಿಹ ಜಲವೆಲ್ಲ ಭಾಗೀರಥಿಯ ಹಿಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು