ವಿಷಯದ ವಿಚಾರ ಬಿಡು

( ರಾಗ ಮೋಹನ ಅಟತಾಳ) ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡು ವೈರಾಗ್ಯ ಭಾಗ್ಯ ಬೇಡು ||ಪ|| ವಿಷವೆಂದು ಕಾಮಕ್ರೋಧಗಳೆಲ್ಲನೀಡಾಡು ಮಸಣ ಮನವೇ ಮಾಧವನ್ನ ಕೊಂಡಾಡು ||ಅ|| ಅನುದಿನವು ಹರಿಕಥೆಯ ಕೇಳಿ ಸಂತೋಷಪಡು ವಿನಯದಿ ಸಜ್ಜನರ ಕೂಡು ಮನಮುಟ್ಟಿ ದುರಾಚರ ಮಾಳ್ಪರನು ನೀ ಕಾಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಊರಿಗೆ ಬಂದರೆ ದಾಸಯ್ಯ

( ರಾಗ ಹಿಂದುಸ್ಥಾನಿ ಕಾಪಿ ಆದಿತಾಳ) ಊರಿಗೆ ಬಂದರೆ ದಾಸಯ್ಯ, ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| ಕೇರಿಗೆ ಬಂದರೆ ದಾಸಯ್ಯ, ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ ||ಅ|| ಕೊರಳೊಳು ವನಮಾಲೆ ಧರಿಸಿದನೆ, ಕಿರು- ಬೆರಳಲಿ ಬೆಟ್ಟವನೆತ್ತಿದನೆ ಇರುಳು ಹಗಲು ನಿನ್ನ ಕಾಣದೆ ಇರಲಾರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಡೆನು ಬಿಡೆನು ನಿನ್ನ

ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ| ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ| ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವೆಂದು ಹರ ಧರಿಸಿದನಾಗ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಂಜನೇಯನೆ ಅಮರವಂದಿತ

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ| ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ| ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ| ಸಿಂಧುಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವ್ಯಾಪಾರ ನಮಗಾಯಿತು

( ರಾಗ ಕಾಮವರ್ಧನಿ/ಪಂತುವರಾಳಿ ಆಟತಾಳ) ವ್ಯಾಪಾರ ನಮಗಾಯಿತು ಶ್ರೀಪತಿಪಾದಾರವಿಂದ ಸೇವೆಯೆಂಬೊ ||ಪ|| ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು ಹರಿದಾಸರ ದಯವೆಂಬೊ ವಲ್ಲಿ ಪರಮ ಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ ದುರಾತ್ಮರಾದವರ ಎದೆ ಮೇಲೆ ನಡೆವಂಥ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಮ ತನ್ನ ಪುರದಿ ಸಾರಿದನು

( ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ) ಯಮ ತನ್ನ ಪುರದಿ ಸಾರಿದನು, ನಮ್ಮ ಕಮಲನಾಭನ ದಾಸರನು ಮುಟ್ಟದಿರೆಂದು ||ಪ|| ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ ನಿಜ ದ್ವಾದಶ ನಾಮ ಧರಿಸಿಪ್ಪರ ತ್ರಿಜಗ ವಂದಿತ ತುಳಸಿಯ ಮಾಲೆ ಧರಿಸಿದ ಸುಜನರುಗಳ ಕೆಣಕದೆ ಬನ್ನಿರೊ ಎಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೇ ಗೋಕುಲ ನಮಗ್ಯಾಕೆ ವೃಂದಾವನ

( ರಾಗ ಕಲ್ಯಾಣಿ ಛಾಪುತಾಳ) ಯಾಕೇ ಗೋಕುಲ ನಮಗ್ಯಾಕೆ ವೃಂದಾವನ ಯಾಕೆ ಸಂತತ ಸುಖವು || ಪ|| ಶ್ರೀಕಾಂತ ಅನೇಕ ಬಗೆಗಳಿಂದ ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ|| ಹೆತ್ತ ತಾಯಿ ತಂದೆ ಅತ್ತೆ ಮಾವಂದಿರ ಮತ್ತೆ ಗಂಡರ ಬಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರು ಬಿಟ್ಟರು ಕೈಯ ನೀ ಬಿಡದಿರು

( ರಾಗ ನಾದನಾಮಕ್ರಿಯ ಆದಿತಾಳ) ಯಾರು ಬಿಟ್ಟರು ಕೈಯ ನೀ ಬಿಡದಿರು ಕಂಡ್ಯ, ನಾರಾಯಣ, ಸ್ವಾಮಿ ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ, ನಾರಾಯಣ || ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ, ನಾರಾಯಣ ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ, ನಾರಾಯಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗ ಬೆನ್ನ ಬಿಡಲೊಲ್ಲ

(ರಾಗ ಶಂಕರಾಭರಣ ಛಾಪುತಾಳ ) ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ|| ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ ಫುಲ್ಲಲೋಚನ ಸುಪ್ರವೀಣ || ಹಿಂದೆ ನೋಡಲು ತಾನೆ , ಮುಂದೆ ನೋಡಲು ತಾನೆ ಮಂದಿರದೊಳಹೊರಗಿಹನೆ || ಮುದ್ದು ಪುರಂದರವಿಠಲರಾಯನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಅನಾಥಬಂಧು ಕಾರುಣ್ಯಸಿಂಧು

(ರಾಗ ನಾದನಾಮಕ್ರಿಯಾ ಛಾಪುತಾಳ ) (ರಾಗ ತೋಡಿ ಅಟತಾಳ) ನೀನೇ ಅನಾಥಬಂಧು ಕಾರುಣ್ಯಸಿಂಧು ||ಪ|| ಮದಗಜವೆಲ್ಲ ಕೂಡಿದರೇನು ಅದರ ಸಮಯಕೊದಗಲಿಲ್ಲ ಮದನಯ್ಯ ಮಧುಸೂದನನೆಂದರೆ ಮುದದಿಂದಲಿ ಬಂದೊದಗಿದೆ ಕೃಷ್ಣ || ಪತಿಗಳೈವರಿದ್ದರೇನು ಸತಿಯ ಭಂಗಕೊದಗಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು