ಪಗಡಿ ಹಾಕೆ ಪೋರಿ

ಪಗಡಿ ಹಾಕೆ ಪೋರಿ

( ರಾಗ ನಾದನಾಮಕ್ರಿಯ ಆದಿ ತಾಳ) ಪಗಡಿ ಹಾಕೆ ಪೋರಿ ತ್ರಿಗುಣಗಳೆಲ್ಲ ಮಾರಿ ||ಪ || ನೇಮದ ಸೀರೆಯನುಟ್ಟು ನಿನ್ನ ಕಾಮದ ಕಚ್ಚೆಯ ಕಟ್ಟು ಪ್ರೇಮದ ಸಜ್ಜನರೊಳಗೆ ನಿಂತು ಮಾತನಾಡೋಣ ಬಾರೆ || ಹಿಂದಕೆ ಹೋಗಲುಬೇಡ ನೀ ಮುಂದಕೆ ಬಂದು ನಿಲ್ಲು ಹಿಂದಿನ ಮುಂದಿನ ಹಂಬಲ ಬಿಟ್ಟು ಒಂದಾಟ ಆಡೋಣ ಬಾರೆ || ತೊಡೆಯ ತೆರೆಯಬೇಡ ನಿ- ನ್ನೊಡೆಯನು ನಗುತಾನೆ ತೊಡೆಯ ತೆರೆದು ತೋರಿದರೆ ನಾಚಿಕೊಂಬರಲ್ಲೆ || ನೇಮ ನಿಷ್ಠೆಯ ನೀಗಿ ಅದು ಸಾಮದಾನವಾಗಿ ಝಾಮ ಝಾಮ ಉಸಿರು ಬಿಡದೆ ಆಟವಾಡೋಣ ಬಾರೆ || ಪಗಡಿ ಎಂಬುದು ಅಲ್ಲ ಪುಗಡಿ ಎಂಬುದು ಸೊಲ್ಲ ಪಗಡಿ ಸೊಗಸು ಪುರಂದರ ವಿಠಲನೊಬ್ಬ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು