ರಾಮರಾಮೆನ್ನಿರೋ
- Read more about ರಾಮರಾಮೆನ್ನಿರೋ
- Log in to post comments
( ರಾಗ ಕಾಪಿ ಆದಿ ತಾಳ)
ರಂಗ ದಧಿಯ ಮಥಿಸುವಂತರಲ್ಲಿ , ಅವರು ಒ-
ದಗಿ ಹೇಳಲು ಬಂದರಿಂತಿಲ್ಲಿ ನಿನ್ನ ಸೊ-
ಬಗು ಗೋವಳರ ಕೂಡ ತಾ ಹೋದ್ಯಂತೆ
(ರಂಗ ಚತುರತನದಿ ಬೆಣ್ಣೆ ಮೆದ್ಯಂತೆ )
ನಾ ಸುಳಸಿ , ಇಂಥಾ ಮಗನು ಯಾಕಾದ್ಯೊ ||
ಅಮ್ಮ, ಕತ್ತಲೆ ಮನೆಯೊಳಗೆ ಬರಲು
ಅಲ್ಲಿ ಬೆಕ್ಕು ಮೊಸರು ಕುಡಿಯುತಿರಲು ನಾನು
ಹೊಕ್ಕು ಹೊಕ್ಕು ಹೊರಡಿಸಿ ಬಂದೆ ಮತ್ತೆ
ಬೆಣ್ಣೆ ಮೆಲ್ಲಲಿಲ್ಲ ಅಂಥಾ ಮಗನು ನಾನಲ್ಲ ||
ರಂಗ , ಅತ್ತೆ ಮನೆಯವರಂತಲಿ
ಅವರ ಹತ್ತಿಲಿ ಹೋಗಿ ನಿಂತಿದ್ದೆಂತೆ ನೀನು
ಅವರ ಚಿತ್ತವ ಪಲ್ಲಟ ಮಾಡಿ ಹೋದ್ಯಂತೆ
ನಾ ಸುಳಸಿ ಇಂಥಾ ಮಗನು ಯಾಕಾದ್ಯೋ ಕೃಷ್ಣಯ್ಯ ||
( ರಾಗ ಅಠಾಣಾ ಖಂಡ ಛಾಪು ತಾಳ)
(ರಾಗ ಕಾಂಭೋಜ , ಅಟತಾಳ)
ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳರಕ್ಷಕ ನೀನೇ ವಿಶ್ವವ್ಯಾಪಕನೇ ||
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||
ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ