ಒಂದೇ ಕೂಗಳತೆ ವೈಕುಂಠ

ಒಂದೇ ಕೂಗಳತೆ ವೈಕುಂಠ

(ರಾಗ ಕಲ್ಯಾಣಿ ಅಟತಾಳ) ಒಂದೇ ಕೂಗಳತೆ ವೈಕುಂಠ ||ಪ|| ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ||ಅ|| ಸರಸಿಯಲಿ ಆನೆ ಪೊರೆಯೆಂದು ಕರೆಯಲು ತ್ವರಿತದಿ ಬಂದು ಕಾಯ್ದ ನರಹರಿ ಕೃಷ್ಣ ಸಲಹೆಂದು ಚೀರಲು ತರಳ ಪ್ರಹ್ಲಾದಗೆ ಕಂಭದಿಂದಲಿ ಬಂದ || ಅಂಬರೀಷ ದ್ವಾದಶಿವ್ರತ ಮಾಡಲು ದೊಂಬಿ ಮಾಡಿದ ದುರ್ವಾಸ ಮುನಿ ಕುಂಭಿಣೀಪತಿ ಕೃಷ್ಣ ಕಾಯೆಂದು ಮೊರೆಯಿಡೆ ಬೆಂಬತ್ತಿ ಚಕ್ರದಿಂ ಮುನಿಶಾಪವ ಕಳೆದ || ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ ಕೃಪೆಯಿಂದ ಅಕ್ಷಯವಿತ್ತ ತಾನು ಕಪಟನಾಟಕಸ್ವಾಮಿ ಪುರಂದರವಿಠಲನ ಗುಪಿತದಿ ನೆನೆವರ ವದನ ವೈಕುಂಠ ||
ದಾಸ ಸಾಹಿತ್ಯ ಪ್ರಕಾರ
ಬರೆದವರು