ಸುಣ್ಣವಿಲ್ಲ ಭಾಗವತರೆ
( ರಾಗ ಪೂರ್ವಿ ಅಟ ತಾಳ)
ಸುಣ್ಣವಿಲ್ಲ ಭಾಗವತರೆ
ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ ||
ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು
ಬಾಳು ಸಟೆ ಎನ್ನ ಬಾಯಿ ನೋಡಿ
ಹಾಳು ಮನೆಯ ಹೊಕ್ಕು ಒಡಲು ಉರಿಯುತಿದೆ
ಹೇಳಿ ಈ ಬದುಕನ್ನು ಪ್ರಯೋಜನವೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಸುಣ್ಣವಿಲ್ಲ ಭಾಗವತರೆ
- Log in to post comments