ಬೇಡ ಪರಸತಿಸ್ನೇಹ

( ರಾಗ ಮೋಹನ. ಝಂಪೆ ತಾಳ) ಬೇಡ ಪರಸತಿಸ್ನೇಹ, ಭ್ರಷ್ಟನಾದ್ಯೋ ಮನುಜ ನೋಡಿಕೋ ನೊಂದವರನು ||ಪ|| ಧರಣಿಯೊಳಗೆ ಜಲಂಧರನು ಗೌರೀಗಣಿಕಿ ಹರನಿಂದ ಹತನಾದನು ಮೂರು ಲೋಕವ ಗೆದ್ದ ಮೂಢ ರಾವಣ ಬಿದ್ದ ಹೀನ ಕೀಚಕನು ಕೆಟ್ಟ, ಭ್ರಷ್ಟ || ಕಾಕಾಸುರನ ನೋಡು ಏಕಾಕ್ಷಿಯಾದನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬರಿದೆ ನೀ ಬಯಸದಿರಿಹಲೋಕ

( ರಾಗ ಕಾಂಭೋಜ ಆದಿ ತಾಳ) ಬರಿದೆ ನೀ ಬಯಸದಿರಿಹಲೋಕಸುಖವೆಂಬೊ , ಅರಗಿನ ಪಾಯಸವ ಕರಣಶುದ್ಧದಿ ಗಳಿಸು ಪರಲೋಕಸುಖವೆಂಬ , ಶ್ಯಾವಿಗೆ ಪಾಯಸವ , ಹೇ ಮನವೆ ||ಅ|| ಮುಂದುವರಿಯದೆ ಬಾಳ್ವ ಮೂಢ ನೃಪನ ಸೇವೆ, ಮುಗ್ಗುರಾಗಿಯ ಹಿಟ್ಟು ಮಂದಮತಿಗಳೊಳು ಸ್ನೇಹವ ಮಾಡಲು, ನೀ ಪೋಗುವೆ ಕೆಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬವ್ವು ಬಂದಿತಲ್ಲ.

( ರಾಗ ಪೀಲು. ಆದಿ ತಾಳ) ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ|| ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ|| ಸೆರಗು ಪಿಡಿದು ನೀ ಹೇಳದೆ ಮಲಗೊ ತಿರುಗಿದರೆ ನೋಡು ಮತ್ತಿಲ್ಲೆ ಬೂದಿಯ ಹಚ್ಚಿದೆ ಕೂದಲು ಬಿಚ್ಚಿದೆ ಸ್ವಾದವ ಕಂಡು ಬಂದಿತಿಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ನೀನೆನ್ನ ಮನ ಮಂದಿರಕ್ಕೆ

( ರಾಗ ಮೋಹನ. ಆದಿ ತಾಳ) ಬಾರೋ ನೀನೆನ್ನ ಮನ ಮಂದಿರಕ್ಕೆ, ತಡಮಾಡುವದೇಕೆ ಮಾರಜನಕ ಹರಿ ನಿನ್ನಗ್ಗಳಿಕೆ, ಸ್ಮರಿಸುವೆ ಕ್ಷಣ ಕ್ಷಣಕೆ ||ಪ|| ಬಾರೊ ಬಾರೋ ಮಧುರಾಪುರಿ ಬಿಟ್ಟು, ಸೇರಿಕೊಳ್ಳದಿರೋ ವರಕರಿಪುರವ ||ಅ|| ಕುಂತೀ ಮಕ್ಕಳ ಮನೆಗ್ಹೋದೇನೆಂದೆ, ಅವರೈದು ಮಂದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತೀದೇವಿ ತಾಯೆ.

(ರಾಗ ಕೇದಾರಗೌಳ. ಅಟ ತಾಳ) ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ|| ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣ ಚಿನ್ನುಮಯ ಸುರರಿಂ ಸೇವಿತೆ ಘನ್ನ ಮಹಿಮಳೆ ಇನ್ನೇನ ಬಣ್ಣಿಪೆ ನಿನ್ನ ಪತಿಗೆ ಬಿನ್ನವಿಸೆನ್ನನುದ್ಧರಿಸಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೇ ಈ ದೇಹವನು ದಂಡಿಸುವೆ ವ್ಯರ್ಥ

( ರಾಗ ಮುಖಾರಿ. ಝಂಪೆ ತಾಳ) ಏಕೇ ಈ ದೇಹವನು ದಂಡಿಸುವೆ ವ್ಯರ್ಥ ||ಪ|| ಏಕಚಿತ್ತದಲಿ ಲಕ್ಷೀಪತಿಯೆನ್ನದೆ ||ಅ|| ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು ಬಕಪಕ್ಷಿಯಂತೆ ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು ದಾನವಾಂತಕನ ಧ್ಯಾನಕೆ ಮೌನವುಂಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ಚಿಂತಿಸುತಿದ್ದಿ ಕೋತಿ ಮನವೆ

( ರಾಗ ಭೈರವಿ. ಝಂಪೆ ತಾಳ) ಏಕೆ ಚಿಂತಿಸುತಿದ್ದಿ ಕೋತಿ ಮನವೆ ||ಪ|| ಲೋಕನಾಥನ ನೆನೆದು ಸುಖಿಯಾಗು ಮನವೆ ||ಅ|| ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು ಕಟ್ಟಕಡೆಯಲಿ ಲಯಕೆ ಯಾರ ಚಿಂತೆ ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ

( ರಾಗ ಪಂತುವರಾಳಿ/ಕಾಮವರ್ಧಿನಿ. ಆದಿ ತಾಳ) ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ ||ಪ|| ಅಟ್ಟ ಅಡುಗೆ ಉಣಲುಬಿಡನು ಕೊಟ್ಟ ಸಾಲ ಕೇಳಬಿಡನು ಪೆಟ್ಟಿಗೆಯೊಳಗಿದ್ದ ಚಿನ್ನವ ತೊಟ್ಟೇನೆಂದರೆ ಯಮನು ಬಿಡನು || ಅಕ್ಕನಿಲ್ಲಿ ಕರೆಯಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧರ್ಮವೇ ಜಯವೆಂಬ ದಿವ್ಯ ಮಂತ್ರ

( ರಾಗ ಸಾವೇರಿ. ಆಟತಾಳ) ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ|| ಮರ್ಮವನರಿತು ಮಾಡಲುಬೇಕು ತಂತ್ರ ||ಅ|| ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು ದ್ವೇಷ ಮಾಡಿದವನ ಪೋಷಿಸಲು ಬೇಕು ಪುಸಿಯಾಡಿ ಕೆಡಿಸುವನ ಹಾಡಿ ಹರಸಲುಬೇಕು ಮೋಸ ಮಾಡುವನ ಹೆಸರು ಮಗನಿಗಿಡಲು ಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧರ್ಮಶ್ರವಣವಿದೇತಕೇ ಮೂರ್ಖಗೆ

( ರಾಗ ದುರ್ಗಾ. ಆದಿ ತಾಳ)

 

ಧರ್ಮಶ್ರವಣವಿದೇತಕೇ ಮೂರ್ಖಗೆ

ಧರ್ಮಶ್ರವಣವಿದೇತಕೇ ||ಪ||

ಕರ್ಮಾನುಷ್ಠಾನವನೆಸಗದಿರುವ

ದುರ್ಮತಿಗೇತಕೆ ಬ್ರಾಹ್ಮಣ ಜನ್ಮ ||ಅ||

 

ಕೋಣಗೆ ವೀಣಾಗಾನವಿದೇತಕೆ

ಮಾಣಿಕ್ಯವೇತಕೆ ಮರ್ಕಟಗೆ

ತ್ರಾಣವು ತೊಲಗಿದ ಹೆಣ್ಣಿಗಿದೇತಕೆ ಕ-

ಟ್ಟಾಣಿ ಮುತ್ತಿನ ಹಾರವು ಕೊರಳಿಗೆ ||

 

ಷಡುರಸ ಅನ್ನವಿದೇತಕೆ ಗರ್ದಭ

ಉಡುಗೊರೆ ಸಹಿತಲೆ ಶ್ವಾನನಿಗೆ

ಕಡು ವೃದ್ಧಗೆ ಮೈನೆರೆದ ಹೆಣ್ಣಿನ

ಒಡನೆ ಭೋಗಿಪೆನೆಂಬಭಿಲಾಷೆಯೇಕೆ ||

 

ಹುಟ್ಟು ಕುರುಡಗೆ ದೀಪವಿದೇತಕೆ

ಭ್ರಷ್ಟನಿಗೇತಕೆ ಕುಲ ಧರ್ಮ

ಸೃಷ್ಟಿಯೊಳಧಮಗೆ ಪುರಂದರವಿಠಲನ

ಮುಟ್ಟಿ ಭಜಿಪೆನೆಂಬ ಅಭಿಲಾಷೆಯೇತಕೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು