ಏಕೇ ಈ ದೇಹವನು ದಂಡಿಸುವೆ ವ್ಯರ್ಥ
( ರಾಗ ಮುಖಾರಿ. ಝಂಪೆ ತಾಳ)
ಏಕೇ ಈ ದೇಹವನು ದಂಡಿಸುವೆ ವ್ಯರ್ಥ ||ಪ||
ಏಕಚಿತ್ತದಲಿ ಲಕ್ಷೀಪತಿಯೆನ್ನದೆ ||ಅ||
ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ
ಮೌನದಲಿ ಕುಳಿತು ಬಕಪಕ್ಷಿಯಂತೆ
ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು
ದಾನವಾಂತಕನ ಧ್ಯಾನಕೆ ಮೌನವುಂಟೆ ||
ಜಪವ ಮಾಡುವೆನೆನುತ ಕಪಟ ಬುದ್ದಿಯ ಗುಣಿಸಿ
ಗುಪಿತದಲಿ ಕುಳಿತು ಫಲವೇನು ನಿನಗೆ
ಅಪರಿಮಿತ ಮಹಿಮ ನಾರಾಯಣ ಎಂದೆನಲು
ಸಫಲವಲ್ಲದೆ ಬೇರೆ ಜಪವು ಉಂಟೆ ||
ಹಿಂದಜಾಮಿಳಗೆ ಮುಕುತಿಯ ನಾಮಮಾತ್ರದಲಿ
ಚಂದದಿಂ ಕರುಣಿಸಲಿಲ್ಲವೇನೊ
ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ
ತಂದೆ ಪುರಂದರವಿಠಲ ಎನು ಕಂಡ್ಯ ಮನವೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments