ಧನ್ವಂತರಿ ಸುಳಾದಿ
- Read more about ಧನ್ವಂತರಿ ಸುಳಾದಿ
- Log in to post comments
( ರಾಗ ಸೌರಾಷ್ಟ್ರ. ಅಟತಾಳ) ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ|| ಬಾಲಕೃಷ್ಣನೆ ಬಾರೋ ಕಾಲಗಡಗವನಿಡುವೆನು ಕೋಲು ಬುಗುರಿ ಚೆಂಡು ನಿನಗೆ ಇಟ್ಟಿರುವೆ ||ಅ|| ಅಣ್ಣಯ್ಯ ಬಲರಾಮ ಬೇಡುವನಯ್ಯ ಅಣ್ಣಯ್ಯ ನೀ ಬಾರೆಲೊ ಎನ್ನ ಸಾಕುಮಾಡದೆ ಓಡಬೇಡವೊ ಈಗ ಬಣ್ಣಿಸಿ ತೂಗುವೆ ಗಮ್ಮನೆ ಮಲಗೊ || ಯೋಗಿಗಳರಸನೆ ನಿನಗೆ ನಾ ಜೋಗುಳ ಪಾಡುವೆನೊ ನಾಗಭೂಷಣ ಬಂದು ಅಂಜಿಸುವ ನಿನ್ನನ್ನ ಜೋಗಿ ಹಣಿಕ್ಹಾಕುವ ಕಣ್ಣು ಮುಚ್ಚಿಕೊಳ್ಳೋ || ಭಕ್ತ ವತ್ಸಲನೆನಲೆ ನಿನ್ನ ನಾ ಮಗುವೆಂದು ಕರೆಯಲೆ ಅಗಣಿತಮಹಿಮನೆ ಜಗವ ಮೋಹಿಪ ರಂಗ ಮಗುವಲ್ಲವೋ ತಂದೆ ಪುರಂದರವಿಠಲಯ್ಯ ||
( ರಾಗ ಪಂತುವರಾಳಿ/ಕಾಮವರ್ಧಿನಿ. ಏಕ ತಾಳ)
ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಆರು ಮುಖದ ಬೂಚಿಯೊಂದು
( ರಾಗ ಶಂಕರಾಭರಣ. ಆದಿ ತಾಳ)
ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ , ಮಗಳೆ ಮನ-
ಶುದ್ಧನಾಗಿ ಗಂಡನೊಡನೆ ಬಾಳಬೇಕಮ್ಮ ||ಪ||
ಅತ್ತೆಮಾವಗಂಜಿಕೊಂಡು ನಡೆಯ ಬೇಕಮ್ಮ, ಮಗಳೆ
ಚಿತ್ತದೊಲ್ಲಭನಕ್ಕರೆಯನು ಪಡೆಯಬೇಕಮ್ಮ
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ, ಮಗಳೆ
ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ ||
ಕೊಟ್ಟು ಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ, ಮಗಳೆ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ, ಮಗಳೆ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ, ಮಗಳೆ