ಅನ್ಯ ಸತಿಯರೊಲುಮೆಗೊಲಿದು

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)

 

ಅನ್ಯ ಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ||

ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ||

 

ಮಿಂದು ಮಲವನ್ನ ಬಿಡಿಸಿ ಮೇಲು ವಸ್ತ್ರವನ್ನು ತೊಡಿಸಿ

ಅಂದವಾದ ಆಭರಣವಿಟ್ಟು ಅರ್ತಿಯಿಂದ ನೋಡುತ

ಗಂಧ ಕಸ್ತೂರಿ ಪುನುಗು ಪೂಸಿ ಘಮಕದಿಂದ ಹೂವ ಮುಡಿಸಿ

ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ || ೧||

 

ಪೊಂಬಣ್ಣ ಎಸೆವ ಮೈ , ಅದರೊಳು ಒಲಿವ ಕುಚಕ್ಕೆ ಕೈಯನಿಟ್ಟು

ಕಂಬುಕಂಧರವ ನೋಡಿ ಕಸ್ತೂರಿನಿಟ್ಟು ಮುಟ್ಟಿಸುತ

ಹಂಬಲಿಸಿ ಸತಿಯ ನೋಡಿ ಹಲವು ಬಂಧದಿಂದ ಕೂಡಿ

ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ || ೨||

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜಬೇಡ ಬೇಡಲೊ

( ರಾಗ ರೇಗುಪ್ತಿ. ಝಂಪೆ ತಾಳ) ಅಂಜಬೇಡ ಬೇಡಲೊ ಜೀವ, ಭವ ಭಂಜನ ಹರಿ ಶರಣರ ಕಾವ ||ಪ|| ಬಂದ ಕಷ್ಟಗಳೆಲ್ಲ ತಾಳಿಕೋ, ಬಲು ಸಂದೇಹ ಬಂದಲ್ಲಿ ಕೇಳಿಕೋ ನಿಂದಾಸ್ತುತಿಗಳ ತಾಳಿಕೋ, ಗೋ- ವಿಂದ ನಮ್ಮವನೆಂದು ಹೇಳಿಕೋ|| ಮಾಧವನಿಗೆ ತನು ಮನ ಮೆಚ್ಚು ಕ್ರೋಧ ರೂಪದ ಮಾಯಿಗಳ ಕಚ್ಚು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದೆ ರಂಗಯ್ಯ ನಿನ್ನ ಬಳಿಗೆ

( ರಾಗ ಆನಂದಭೈರವಿ. ಅಟ ತಾಳ) ಬಂದೆ ರಂಗಯ್ಯ ನಿನ್ನ ಬಳಿಗೆ ||ಪ|| ಎಲ್ಲಿಗ್ಹೋದರು ಸುಖವಿಲ್ಲ, ಅವ- ರೆಲ್ಲರ ಸೇವೆಯ ಮಾಡ ಬೇಕಲ್ಲ ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ- ನ್ನಲ್ಲಿ ತಪ್ಪುಗಳೆಣಿಸುವರೆಲ್ಲ || ಕಸಮುಸುರೆಯ ಮಾಡಲಾರೆ ......................... (?) ಸೊಸೆಯ ಮಗನ ಮಾತು ಬೇರೆ ,ಇಂಥಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೈಲಿಗೆ ಬೈಲಾಗಿತು

( ರಾಗ ಬೆಹಾಗ್. ಆದಿ ತಾಳ) ಬೈಲಿಗೆ ಬೈಲಾಗಿತು ಬೈಲೊಳಗೆ ||ಪ|| ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸಾಡಿ ಸೂತ್ರ ಕಡಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೊ ಮನುಜ || ಚಂದಾಗಿ ಜ್ಯೋತಿಯು ಬೆಳಗಿ ಎಣ್ಣೆಯು ಬತ್ತಿಯು ಹಾಕಿ ಎಣ್ಣೆ ಮುಗಿಯಿತು ಬತ್ತಿ ಕಡಿಯಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಭಿಮಾನವೇಕೆ ಸ್ತ್ರೀಯರಲ್ಲಿ

( ರಾಗ ಕೇದಾರಗೌಳ. ಮಟ್ಟೆ ತಾಳ) ಅಭಿಮಾನವೇಕೆ ಸ್ತ್ರೀಯರಲ್ಲಿ ||ಪ|| ಭಂಡತನ ಮಾಡೋರು ತುಂಡು ಮುಂಡೇರು ||ಅ|| ಒಡೆತನ ಬರುವಾಗ ತನ್ನ ಪತಿಯನು ಕಂಡು ಚೆಲುವ ಚೆನ್ನಿಗನೆಂದು ಪೊಗಳುವರೊ ಬಡತನವು ಬಂದು ತಾ ಕಾಡುವಾ ವೇಳೆಯಲಿ ಮುದಿಯನ ಕೈ ಪಿಡಿದು ಕೆಟ್ಟನೆಂಬೋರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಯ್ಯ ಮನೆಗೆ ರಂಗಯ್ಯ

( ರಾಗ ಪಂತುವರಾಳಿ/ಕಾಮವರ್ಧಿನಿ. ಛಾಪು ತಾಳ) ಬಾರಯ್ಯ ಮನೆಗೆ ರಂಗಯ್ಯ ನೀನು ||ಪ|| ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ ಜಾರಚೋರ ಕೃಷ್ಣ ಜಾನಕೀಪತಿ ರಾಮ ||ಅ|| ನಂದ ನಂದನ ನವನೀತ ಚೋರ ಕೃಷ್ಣ ಮಂದರೊದ್ಧರನೆ ಮಾಧವರಾಯ ರಾಮ || ಗೋಕುಲದೊಳಗೆ ಗೋಪಿಯರ ಕೂಡಿ ಲೋಕ ನೋಡಲವರ ಕಾಕುಮಾಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಮ್ಮ ನಾವಿಬ್ಬರಾಡುವ

( ರಾಗ ಮೋಹನ. ಅಟ ತಾಳ) ಬಾರಮ್ಮ ನಾವಿಬ್ಬರಾಡುವ ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಕಾಡುವ ಕಪಿ ಶಯನಂಗಳು ಬೇಡುವ ಜ್ಞಾನ ಮಂಟಪದಲಿ ಜೋಡಿ ಕೂಡಾಡುವ ||ಅ|| ಮೂರು ಮನೆಯ ಭೇದವು ಮಾಡಿ ಮತ್ತೈದೆಂಟು ಮನೆ ಕಟ್ಯಾಡುವ || ಪುಂಡರೀಕಾಕ್ಷ ಶೇಷನ ಮೇಲೆ ಭೂಮಂಡಲದೊಳಗೆ ಬ್ರಹ್ಮಾಂಡವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರವ್ವ ಭಾಗೀರಥಿ

( ರಾಗ ಬಿಲಹರಿ. ಆದಿ ತಾಳ) ಬಾರವ್ವ ಭಾಗೀರಥಿ ತೋರವ್ವ ಜನರಿಗೆ ||ಪ|| ನಾ ಸ್ನಾನ ಮಾಡುವುದು ತೋರವ್ವ ಜನರಿಗೆ ||ಅ|| ವ್ಯಾಸಮುನಿ ರಾಯರು ಬಂದು ಭೋಜನಕ್ಕೆ ಕರೆಯಲು ತ್ವರಿತದಿಂದಲಿ ಬಂದು ಪಾತ್ರದಲಿ ಕುಳಿತೆ ದಾಸರ ನುಡಿ ಕೇಳಿ ಲೇಸಾಗಿ ತಾ ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ

( ರಾಗ ಮಧ್ಯಮಾವತಿ. ಅಟ ತಾಳ) ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ ಒಡವೆ ವಸ್ತು ತಾಯಿ ತಂದೆ ಒಡೆಯ ಕೃಷ್ಣನಿರಲಿಕ್ಕಾಗಿ ||ಪ|| ಮಡದಿ ಮಕ್ಕಳು ಎದುರಿಸಿದರೆ ಕಡೆಗಣಿಸಿ ಕೈದುಡುಕೀ ಕಂಡ್ಯ ಅಡಿಕೆಹೋಳಿಗೆ ಹೋದ ಮಾನ ಆನೆ ಕೊಟ್ಟರೆ ಬಾರದೋ || ಒಪ್ಪತ್ತು ಭಿಕ್ಷವ ಬೇಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಚ್ಚರದಲಿ ನಡೆ

( ರಾಗ ಆನಂದಭೈರವಿ. ಅಟ ತಾಳ) ಎಚ್ಚರದಲಿ ನಡೆ ಮನವೆ ನಡೆ ಮನವೆ ||ಪ|| ಮುದ್ದು ಅಚ್ಯುತನ ದಾಸರ ಒಡನಾಡು ಮನವೆ ||ಅ|| ಅನ್ನ ದಾನವ ಮಾಡುವುದಿಲ್ಲಿ, ಮೃ- ಷ್ಟಾನ್ನವ ತಂದು ಮುಂದಿಡುವರು ಅಲ್ಲಿ ಅನ್ಯಾಯ ನುಡಿವುದು ಇಲ್ಲಿ, ನಿನ್ನ ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು