ದ್ವಾರಕಾಪುರದ ಚಂದ್ರಾನನೆಯರು

( ರಾಗ ಮೋಹನ ಆದಿ ತಾಳ) ದ್ವಾರಕಾಪುರದ ಚಂದ್ರಾನನೆಯರು ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ|| ಹಗಲೆಲ್ಲ ಹರಿಯ ಆಹ್ನಿಕವು ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?) ಕಳೆದು ಮಿಗೆ ಹರುಷದಿ ರಾತ್ರಿಯಲಿ ಹರಿಯೊಡನೆ ನಗೆ ನುಡಿಯಿಂದ ದಣಿಯದಲೆ ಉದಿಸಿದನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ದಯ ಬಾರದೋ

(ರಾಗ ಭೈರವಿ ಆದಿ ತಾಳ) ಏಕೆ ದಯ ಬಾರದೋ ಲೋಕನಾಯಕ ನಿನಗೇಕೆ ||ಪ|| ಇಂದಿರೇಶ ನಿಮ್ಮ ಪಾದ- ದ್ವಂದ್ವವ ನಂಬಿದೆನಯ್ಯ ಬಂದು ಸಲಹೊ ಬೇಗದಿಂದ ನಂದಗೋಪನ ಕಂದ ನಿನಗೆ || ಸೃಷ್ಟಿಯೊಳಗೆ ನಿನಗೆ ಎ- ಳ್ಳಷ್ಟು ಕರುಣ ಬಾರದೇಕೊ ಸಿಟ್ಟೇಕೊ ಎನ್ನ ಮೇಲೆ ಮುಷ್ಟಿಮರ್ದನ ಕೃಷ್ಣ ನಿನಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ಚಿಂತಿಸುವೆ

( ರಾಗ ನೀಲಾಂಬರಿ. ಮಟ್ಟೆ ತಾಳ) ಏಕೆ ಚಿಂತಿಸುವೆ ಬರಿದೆ ಮರುಳೆ ||ಪ|| ವಿಧಿ ಬರೆದ ವಾಕು ತಪ್ಪದು ಎಂದಿಗೂ ಮರುಳೆ ||ಅ|| ಹುಟ್ಟುವುದಕಿಂತ ಮೊದಲೆ ತಾಯ ಸ್ತನ ದಿಟ್ಟ ಕ್ಷೀರವನು ಉಂಡು ತೊಟ್ಟಿಲೊಳು ಮಲಗುವಾಗ ಗಳಿಸಿ ತಂ- ದಿಟ್ಟು ನೀನುಣುತಿದ್ದೆಯೊ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ನಿನಗಿಷ್ಟು ಗಂಜಾಲ

( ರಾಗ ಗೌಳಪಂತುವರಾಳಿ ಅಟತಾಳ / ಕಾಮವರ್ಧಿನಿ. ಛಾಪು ತಾಳ) ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ|| ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ ಕಕ್ಕಸಕುಚಗಳ ಕೈಲಿ ಕೊಡುವವಳಲ್ಲ || ಸದರ ಬೇಡ ನಿನ್ನ ಬಗೆಯೆಲ್ಲ ನಾ ಬಲ್ಲೆ ಬೆದರಿಸಿದರೆ ನಾನು ಅಂಜುವ ಹೆಣ್ಣಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ಗೋಪಾಲ ಕರೆಯುತಾನೆ

( ರಾಗ ಶಂಕರಾಭರಣ. ಆದಿ ತಾಳ) ಏಕೆ ಗೋಪಾಲ ಕರೆಯುತಾನೆ, ಎಲೆ ಸಖಿಯೆ ಎನ್ನ ಏಕೆ ಗೋಪಾಲ ಕರೆಯುತಾನೆ ||ಪ|| ಕಣ್ಣು ಸನ್ನೆಯ ಮಾಡುತಾನೆ ಮಾತು ಬಗೆಬಗೆ , ಹಣ್ಣು ಕೈಯಲಿ ತೋರುತಾನೆ , ಎನ್ನ ಚೆಲುವಿಕೆ ಬಣ್ಣಿಸುತಲಿ ತಿರುಗುತಾನೆ, ಇವ ನೂರು ವರಹ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ

( ರಾಗ ಕೇದಾರಗೌಳ. ಅಟ ತಾಳ) ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ಕಳ್ಳ ಕೃಷ್ಣನ ಹಾವಳಿ ಘನವಾಯಿತು ||ಪ|| ನೆಲುವು ನಿಲುಕದೆಂದಿಡುವೆನೆ ಈ ಬೆಳಿಯಾಲಾಜಾಂಡ ವಾಡಿಯೊಳಿಲ್ಲ ತಿಳಿಯದೆ ಕೆಳದಲ್ಲಿರಿಸುವೆನೆ ಈ ಬೆಳಕುಗಳೆಲ್ಲ ಇವನ ಕಂಗಳಾಧಳಾ || ಎವೆ ಇಡದಲ್ಲಿ ಕಾದಿರುವೆನೆ ನೋಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ

( ರಾಗ ಕಾಂಭೋಜ. ಝಂಪೆ ತಾಳ) ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ ಸಾಕಲಾರದೆ ಎನ್ನೆನೇಕೆ ಪುಟ್ಟಿಸಿದೆ ||ಪ|| ಎನ್ನ ಕುಲದವರಿಲ್ಲ , ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ , ಮನಕೆ ಜಯವಿಲ್ಲ | ಹೊನ್ನು ಚಿನ್ನಗಳಿಲ್ಲ , ಒಲಿಸಿಕೊಂಬುವರಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ವೃಂದಾವನ ಸಾಕು ಗೋಕುಲವಾಸ

( ರಾಗ ಮೋಹನ. ಝಂಪೆ ತಾಳ) ಏಕೆ ವೃಂದಾವನ ಸಾಕು ಗೋಕುಲವಾಸ ಏಕೇ ಬಂದೆಲೊ ಉದ್ಧವ ಸಾಕು ಸ್ನೇಹದ ಮಾತನೇಕಮಹಿಮನು ತಾನು ಆ ಕುಬುಜೆಯನು ಕೂಡಿದ, ಉದ್ಧವ ||ಪ|| ಬಿಲ್ಲು ಬಿಳಿನಯ್ಯನ ಬೇಟೆ ನಗೆ ನುಡಿ ನೋಟ ಇಲ್ಲದಂತಾಯಿತಲ್ಲ ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನು ವಲ್ಲಭನ ಒಯ್ದನಲ್ಲ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ನಿರ್ದಯನಾಗುವೆ

( ರಾಗ ಕಲ್ಯಾಣಿ. ಅಟ ತಾಳ) ಏಕೆ ನಿರ್ದಯನಾಗುವೆ, ರಂಗಯ್ಯ ರಂಗ ಏಕೆ ನಿರ್ದಯನಾಗುವೆ ||ಪ|| ಏಕೆ ನಿರ್ದಯ ರಂಗ, ಕಾರುಣ್ಯಪತಿಯೆನ್ನ ಸಾಕುವುದು ನಿನ್ನ ಭಾರ ಪಾಕಶಾಸನವಂದ್ಯ ||ಅ|| ಅರಿತು ಪಾಡುವೆನೆಂದರೆ, ರಂಗಯ್ಯ ನಿನ್ನ ಅರಿತವರಾರಯ್ಯ ಅರಿಯಬಾರದ ನಿನ್ನ ಹೊಂದುವುದ್ಹ್ಯಾಂಗಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹ ಸುಳಾದಿ

ನರಸಿಂಹ ಸುಳಾದಿ ರಚನೆ - ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ ದುರಿತ ಸಂಹಾರ ಮಾಯಾಕಾರ
ದಾಸ ಸಾಹಿತ್ಯ ಪ್ರಕಾರ
ಬರೆದವರು