ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ
( ರಾಗ ಪೂರ್ವಿಕಲ್ಯಾಣಿ. ಛಾಪು ತಾಳ)
ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ||ಪ||
ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು ||ಅ|
ಜನನ ಮರಣವಿಲ್ಲ, ಅಲ್ಲಿ, ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ, ಅನುಮಾನದ ಸೊಲ್ಲೇ ಇಲ್ಲ ||
ನಿದ್ರೆಯು ಅಲ್ಲಿಲ್ಲ, ರೋಗೋ-ಪದ್ರಗಳಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ, ಸ-ಮುದ್ರಶಯನ ಬಲ್ಲ ಎಲ್ಲ ||
ಸಾಧು ಜನರ ಕೂಡೆ, ಮೋಕ್ಷಕೆ, ಸಾಧನೆಗಳ ಮಾಡೆ
ಮಾಧವ ಪುರಂದರವಿಟ್ಠಲರಾಯನು, ಆದರಿಸುವನೆಲ್ಲ ಬಲ್ಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments