ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ

ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ

( ರಾಗ ಮಧ್ಯಮಾವತಿ. ಅಟ ತಾಳ) ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ ಒಡವೆ ವಸ್ತು ತಾಯಿ ತಂದೆ ಒಡೆಯ ಕೃಷ್ಣನಿರಲಿಕ್ಕಾಗಿ ||ಪ|| ಮಡದಿ ಮಕ್ಕಳು ಎದುರಿಸಿದರೆ ಕಡೆಗಣಿಸಿ ಕೈದುಡುಕೀ ಕಂಡ್ಯ ಅಡಿಕೆಹೋಳಿಗೆ ಹೋದ ಮಾನ ಆನೆ ಕೊಟ್ಟರೆ ಬಾರದೋ || ಒಪ್ಪತ್ತು ಭಿಕ್ಷವ ಬೇಡು ಒಬ್ಬರಿಗೊಂದಿಷ್ಟು ನೀಡು ಅಪ್ಪನಾದಚ್ಯುತನ ಪಾಡು ಆನಂದದಿಂದೋಲಾಡು || ಭೋಗ್ಯ(ಯೋಗಕೆ)ಕರ್ಮಂಗಳು ಎಲ್ಲ ನೀಗಿ ಕಳೆದು ಪೋಗುವ ತನಕ ಮಾಗಿ ಕೋಕಿಲಯೆಂದದಿ ನೀ ಮುದುರಿಕೊಂಡಿರು ಒದರಬೇಡ || ಓದು ತರ್ಕವೆಲ್ಲ ಭ್ರಾಂತಿ ಆದಿದೇವನ ಕಾನದನಕ ಬೂದಿ ಮುಚ್ಚಿದ ಕೆಂಡದಂತೆ ಬುದ್ಧೀಲಿರು ನಾ ಹೇಳೇನಂತೆ || ದೊರೆತನವಿದ್ದೇನು ಹೆಚ್ಚು ಸಿರಿತನವಿದ್ದೇನು ಮೆಚ್ಚು ವರದಪುರಂದರವಿಠಲನ್ನ ನರದೇಹದಲಿ ನೋಡದನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು